ಮಂಗಳೂರು ; ಕೋಟೆಕಾರ್ ಬ್ಯಾಂಕ್ ರಾಬರಿ ಪ್ರಕರಣಕ್ಜೆ ಸಂಬಂಧಿಸಿದಂತೆ ಮುಂಬೈ ಮೂಲ ಹಾಗೂ ತಮಿಳುನಾಡು ಮೂಲದ ದರೋಡೆಕೋರರನ್ನು ಬಂಧಿಸಿದ್ದಾರೆಂದು ಮಾಹಿತಿ ದೊರೆತಿದೆ.

ದರೋಡೆಗೆಂದೇ ಈ ತಂಡ ಮಂಗಳೂರಿಗೆ ಬಂದಿದ್ದು ದರೋಡೆ ಮಾಡಿ ಕೇರಳದಿಂದ ತಮಿಳುನಾಡು ಗೆ ಪರಾರಿಯಾಗಿದ್ದರು. ಮುಂಬೈಯಿಂದ ಮಾಹಿತಿ ಕಲೆ ಹಾಕಿ ತಮಿಳುನಾಡಿಗೆ ತೆರಳಿ ಬಂಧನ ಮಾಡಿದ್ದೇವೆ ಎಂದು ಪೋಲಿಸ್ ಕಮಿಷನರ್ ತಿಳಿಸಿದ್ದಾರೆ. ಮುರುಗಂಡಿ ದೇವರ್ ಈ ಪ್ರಕರಣದ ಮುಖ್ಯ ಕಿಂಗ್ ಪಿನ್ ಆಗಿದ್ದು ಪ್ರಕಾಶ್ ಜೋಶ್ವಾ ,ಮನಿವೆನನ್ ನನ್ನು ಬಂಧಿಸಿದ್ದಾರೆ.
ತಮಿಳುನಾಡಿನ ತಿರುವನ್ನೇಲಿಯಿಂದ ಬಂಧನ ಮಾಡಿದ್ದು, ಬಂಧಿತರಿಂದ ಮಹಾರಾಷ್ಟ್ರ ಮೂಲದ ಫಿಯೆಟ್ ಕಾರು ವಶಪಡಿಸಿಕೊಂಡಿದ್ದಾರೆ ಆರೋಪಿ ಮುರುಗುಂಡಿ ಕಾರನ್ನು ತಿರುವನ್ನಲಿ ತನಕ ಕೊಂಡು ಹೋಗಿದ್ದು ಜೊತೆಗೆ ಕಾರಿನಲ್ಲಿದ್ದ ಎರಡು ಗೋಣಿ ಚೀಲ ವಶವನ್ನು ವಶ ಪಡಿಸಿಕೊಂಡಿದ್ದಾರೆ. ಗುಪ್ತಚರ ಇಲಾಖೆ ಈ ಪ್ರಕರಣ ಬೇಧಿಸಲು ಸಹಾಯ ಮಾಡಿದ್ದು ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ ಹಾಗೂ ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ. ಆರೋಪಿಗಳನ್ನಯ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.