ಮಂಗಳೂರು : ಮಂಡ್ಯತಾಲೂಕಿನ ಕೆರಗೋಡಿನಲ್ಲಿನ ಹನುಮ ಧ್ವಜವನ್ನು ತೆರವುಗೊಳಿಸಿದನ್ನು ಖಂಡಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮಂಗಳೂರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು. ಬಜರಂಗದಳ ಮತ್ತು ವಿಹೆಚ್ಪಿ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣೆ ಮಾಡಿದರು ಹಿಂದೂ ವಿರೋಧಿ ಸಿದ್ದರಾಮಯ್ಯ ಸರಕಾರದ ವಿದುದ್ದ ಘೋಷಣೆ ಕೂಗಿದರು.
ವಿಹೆಚ್ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ ರಾಜ್ಯದ ಎಲ್ಲ ವಿಹೆಚ್ಪಿ ಮತ್ತು ಬಜರಂಗದಳ ಕಾರ್ಯಕರ್ತರು ಕೆರೆಗೋಡುಗೆ ಹೋಗುತ್ತಾರೆ . ಸಂಘರ್ಷ ಆದರು, ಕೇಸು ಹಾಕಿದರು ಕೆರೆಗೋಡುನಲ್ಲಿ ಹನುಮಧ್ವಜ ಹಾರಿಸಿಯೇ ಹಾರಿಸುತ್ತೇವೆ. ಇಂದು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹನುಮಾನ್ ಚಾಲೀಸಾ ಪಠಣ, ಪ್ರತಿಭಟನೆ ನಡೆಯುತ್ತಿದೆ. ಮಂಡ್ಯ ಜಿಲ್ಲೆ, ಕೆರೆಗೋಡು ಗ್ರಾಮ ಸಂಪೂರ್ಣ ಬಂದ್ ಆಗಿದೆ. ಮುಂದಿನ ದಿನದಲ್ಲಿ ಹನುಮ ಧ್ವಜವನ್ನು ಕೆರೆಗೋಡು ಗ್ರಾಮದಲ್ಲಿ ಮರುಸ್ಥಾಪನೆ ಮಾಡುತ್ತೇವೆ.ರಾಜ್ಯದಲ್ಲಿ ಸಾಂಕೇತಿಕವಾಗಿ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ,ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ ದೇಶವನ್ನು ವಿಭಜನೆ ಮಾಡುವ ಷಡ್ಯಂತ್ರ ಮಾಡುತಿದ್ದಾರೆ, ಹನುಮ ಧ್ವಜ ಮರುಸ್ಥಾಪನೆ ಮಾಡದೆ ಇದ್ದರೆ ಕೆರೆಗೋಡು ಚಲೋ ಎಂಬ ಕಾರ್ಯಕ್ರಮವನ್ನು ಮಾಡುತ್ತೇವೆ ಹೇಳಿದರು.
ಮಂಡ್ಯ ಜಿಲ್ಲೆಯ ರಾಮಭಕ್ತರಿಗೆ ಬೆಂಬಲ ನೀಡಲು ಬಜರಂಗದಳದ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿಸಿದ ಅವರು ಕಳೆದ 30 ವರ್ಷಗಳಿಂದ ಯಾವುದೇ ಗಲಾಟೆ ಇಲ್ಲದೇ ಎಲ್ಲಾ ಧ್ವಜ ಹಾಕಲಾಗುತ್ತಿತ್ತು. ವೋಟ್ ಬ್ಯಾಂಕ್ಗಾಗಿ ಹನುಮಧ್ವಜ ತೆಗೆದು ರಾಷ್ಟ್ರ ಧ್ವಜ ಹಾಕಲಾಗಿದೆ. ಹನುಮಧ್ವಜದ ಜೊತೆ ಇನ್ನೊಂದು ಧ್ವಜ ಸ್ಥಂಭ ಹಾಕುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವಿದೆ. ವಿಧಾನಸಭಾ ಚುನಾವಣೆ ಗೆಲ್ಲಬೇಕಾದರೆ ಹೊಸ ಅಸ್ತ್ರವನ್ನು ಉಪಯೋಗಿಸಿದರು. ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದರು. ಅಧಿಕಾರಕ್ಕೆ ಅಂದು 7 ತಿಂಗಳಾಯಿತು ಇನ್ನು ಬ್ಯಾನ್ ಮಾಡುವ ತಾಕತ್ ಬಂದಿಲ್ಲ ಎಂದು ಹೇಳಿದರು.


