ಮಂಗಳೂರು : ಮಹಾನಗರ ಪಾಲಿಕೆಗೆ ಸಂಭಂಧಿಸಿದ ಕುದ್ರೋಳಿಯಲ್ಲಿದ್ದ ಪ್ರಾಣಿಗಳ ವಧಾಗೃಹವು ಹಲವು ಕಾನೂನು ಮತ್ತು ನಿಯಮಾವಳಿಗಳನ್ನು ಪಾಲಿಸಲು ಅಷ್ಟು ಸಣ್ಣ ಸ್ಥಳ ಹಾಗೂ ಆ ಪ್ರದೇಶದಲ್ಲಿ ಕಾರ್ಯಾಚರಿಸಲು ಸಾಧ್ಯವಿಲ್ಲದ ಕಾರಣ ಅದನ್ನು ಮುಚ್ಚಲಾಗಿದೆ. ಮತ್ತು ಇದೆ ಕಾರಣಕ್ಕೆ ಬೇರೆ ಪ್ರದೇಶದ ವಿಸ್ತಾರವಾಗಿರುವ ಸ್ಥಳದಲ್ಲಿ ಸ್ಥಾಪಿಸಲು ಹಲವು ಪ್ರಯತ್ನ ನಡೆದಿದ್ದು ಕುದ್ರೋಳಿ ವಧಾಗೃಹವು ಆಯಕಟ್ಟಿನ ಪ್ರದೇಶದಲ್ಲಿ ಇರುವುದರಿಂದ ಅಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸಲು ಸ್ಥಾಪಿತ ಹಿತಾಸಕ್ತಿ ಉಳ್ಳವವರಿಗೆ ಸುಲಭ ಸಾಧ್ಯವಾಗಿದ್ದು ವಧಾಗೃಹವನ್ನು ಮತ್ತೆ ಪ್ರಾರಂಭಿಸದಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ಹಿಂದುಗಳಿಗೆ ಪರಮ ಪವಿತ್ರವಾದ ಗೋಮಾತೆ ವಧೆ ಕರ್ನಾಟಕದಲ್ಲಿ ಎಂದೆಂದಿಗೂ ನಿಷೇಧವಾಗಿತ್ತಾದರೂ ಅಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ವಧಿಸಲಾಗುತಿತ್ತು. ಮತ್ತು ಹಾಗೆ ಕಾನೂನು ಬಾಹಿರವಾಗಿ ಕರುಗಳ ಸಹಿತ ಗೋಮಾತೆಯನ್ನು ವಧಿಸಲು ಅಕ್ರಮವಾಗಿ ಹಿಂಸಾತ್ಮಕವಾಗಿ ಸಾಗಿಸಲಾಗುತಿತ್ತು. ಅಂತಹ ಅಂದರೆ ಕುದ್ರೋಳಿ ವಧಾಗೃಹಕ್ಕೆ ವಧೆಗಾಗಿ ಹಿಂಸಾತ್ಮಕವಾಗಿ ಗೋವುಗಳ ಸಾಗಾಟವೆಂದು ಉಲ್ಲೇಖಿಸಿದ ಹಲವಾರು ಪ್ರಕರಣಗಳು ಕಳೆದ ಹತ್ತಾರು ವರ್ಷಗಳಲ್ಲಿ ದಾಖಲಾಗಿವೆ. ಇದೆಲ್ಲವೂ ಅಲ್ಲಿ ಅಕ್ರಮವಾಗಿ ಗೋವಧೆ ನಡೆಯುತಿದ್ದುದು ಖಚಿತ. ಇದನ್ನು ಹಲವಾರು ಬಾರಿ ವಿವಿಧ ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನು ನಿಲ್ಲಿಸುವುದಕ್ಕೆ ಮನಪಾ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಅದೇ ಸ್ಥಾಪಿತ ಹಿತಾಸಕ್ತಿಯ ಗುಂಪು ಅಕ್ರಮ ಗೋವಧೆ ನಡೆಸುವ ಉದ್ದೇಶದಿಂದಲೇ ಅಲ್ಲಿ ಮತ್ತೆ ವಧಾಗೃಹ ಪ್ರಾರಂಭಿಸಲು ಒತ್ತಡ ಹೇರುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಈಗ ವಧಾಗೃಹ ಮುಚ್ಚಿದ್ದರೂ ಮಂಗಳೂರಿನಲ್ಲಿ ಮಾಂಸ ಬಳಕೆದಾರರಿಗೆ ಮಾಂಸ ಪೂರೈಕೆಗೆ ಕೊರತೆಯಾದ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಈ ವಧಾಗೃಹದಲ್ಲಿ ಗೋಮಾಂಸ ದಂಧೆ ನಡೆಸುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಹೀಗೆ ನಮಗೆಲ್ಲರಿಗೂ ಪರಮ ಪೂಜನೀಯವಾಗಿರುವ ಗೋವಂಶ ಅಂದರೆ ಹೋರಿ,ದನ,ಕರು ವಧಿಸುವುದೇ ಉದ್ದೇಶ ಇರುವ ಹಾಗೂ ಇತರ ಪ್ರಾಣಿಗಳನ್ನು ವಧಿಸಲು ಇರುವ ಹಲವು ಕಾನೂನು ಉಲ್ಲಂಘಿಸಿ ಇಲ್ಲಿ ಮತ್ತೆ ವಧಾಗೃಹ ಪ್ರಾರಂಭಿಸಬಾರದು ಎಂದು ಎಂದು ಮನವಿ ಸಲ್ಲಿಸಸಿದ್ದಾರೆ.
ಗೋವುಗಳನ್ನು ಕರುಗಳನ್ನು ಅಟ್ಟಿಯಿಂದ ಕದ್ದು ತಂದು ಹಿಂಸಾತ್ಮಕವಾಗಿ ಸಾಗಿಸುವುದು, ವಧಿಸುವುದು ಹಿಂದೂ ಸಮಾಜದ ಜನರ ನೋವಾಗಿ ಮತ್ತೆ ಸಂಘರ್ಷಗಳ ಸಾಧ್ಯತೆಯಾಗಿ ಗಲಭೆಗಳಿಗೆ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾದ ಎಚ್. ಕೆ ಪುರುಷೋತ್ತಮ, ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಗೋರಕ್ಷಾ ಪ್ರಮುಖ ಹರೀಶ್ ಕುಮಾರ್ ಶೇಟ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಸಹ ಕಾರ್ಯದರ್ಶಿ ನವೀನ್ ಕೊಣಜೆಯವರು ಉಪಸ್ಥಿತರಿದ್ದರು.


