Friday, March 13, 2026
Flats for sale
Homeಜಿಲ್ಲೆಮಂಗಳೂರು : ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ವರಮಹಾಲಕ್ಷ್ನ್ಮಿ ಹಬ್ಬದ ಸಂಭ್ರಮ..!

ಮಂಗಳೂರು : ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ವರಮಹಾಲಕ್ಷ್ನ್ಮಿ ಹಬ್ಬದ ಸಂಭ್ರಮ..!

ಮಂಗಳೂರು : ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ ವತಿಯಿಂದ 1೦ ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಕುದ್ರೋಳಿಯ ‘ಕೂಟಕ್ಕಳ ಆಡಿಟೋರಿಯಂ’ನಲ್ಲಿ ನೆರವೇರಿತು. ಸಹಸ್ರಾರು ಭಕ್ತರು ಈ ವೇಳೆ ಹಾಜರಿದ್ದರು.

ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಭಗವತೀ ಅಮ್ಮನವರಲ್ಲಿ ಪ್ರಾರ್ಥನೆ ನೆರವೇರಿ, ಕ್ಷೇತ್ರದ ಆಚಾರಪಟ್ಟವರಿಂದ ದೀಪ ಪ್ರಜ್ವಲನ ನಡೆಯಿತು. ಗುರಿಕಾರರು ಹಾಗೂ ಕ್ಷೇತ್ರದ ಆಡಳಿತ ಮಂಡಳಿ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.

ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಂಕಲ್ಪ ನಡೆದು, ಶೋಡಷ ಉಪಚಾರ ಸೇವೆ, ಶ್ರೀ ಲಕ್ಷ್ಮೀ ಅಷ್ಟೋತ್ತರ, ಶ್ರೀ ಲಕ್ಷ್ಮೀ ಅಷ್ಟಕ, ಸಾಮೂಹಿಕ ಕುಂಕುಮಾರ್ಚನೆ ನಡೆದು ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

Most Popular