ಮಂಗಳೂರು : ಮಂಗಳೂರಿನಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಸುದ್ದಿಗೋಷ್ಟಿ ನಡೆಸಿದ್ದಾರೆ.
ಬಳಿಕ ಮಾತನಾಡಿ ನಾನು ಕಾರ್ಕಳದಲ್ಲಿ ಸ್ಪರ್ಧೆ ಮಾಡುವುದು ಖಚಿತ, ಅದರಲ್ಲಿ ಬದಲಾವಣೆ ಇಲ್ಲ , ನಾನು ಮೂರು ತಿಂಗಳಿನಿಂದ ಆ ಕ್ಷೇತ್ರದಲ್ಲಿ ದುಡೀತಾ ಇದೀನಿ, ಈಗಾಗಲೇ ಮೊದಲ ಹಂತವಾಗಿ ಅಲ್ಲಿ 50 ಕಾರ್ಯಕರ್ತರು ಬಂದಿದಾರೆ,ನನ್ನ ಮೇಲೆ 109 ಕೇಸ್ ಗಳಲ್ಲಿ ಜಾಸ್ತಿ ಕೇಸು ಹಾಕಿದ್ದೇ ಬಿಜೆಪಿಯವರು ,ನನಗೆ ಗಡಿ ನಿರ್ಬಂಧ ಮಾಡಿದ್ದು ಹೆಚ್ಚು ಬಿಜೆಪಿಯವರೇ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ಚುನಾವಣೆ ಸಂಧರ್ಭದಲ್ಲಿ ನನಗೆ ಗಡಿ ಪ್ರವೇಶ ನಿರ್ಬಂಧ ವಿಧಿಸಲ್ಲ ಅನಿಸುತ್ತೆ,ಆದರೆ ನನಗೆ ನಿರ್ಬಂಧ ಮಾಡಿದ್ರೆ ನಾನು ಈ ಬಾರಿ ಕೋರ್ಟ್ ಗೆ ಹೋಗಲ್ಲ , ಹೊರಗಡೆಯೇ ನಿಂತು ನಾನು ಚುನಾವಣೆ ಗೆಲ್ತೀನಿ.
ನಾನು ಹಿಂದೆ ಸರಿಯೋ ಮಾತೇ ಇಲ್ಲ, ನನಗೆ ಸ್ಪರ್ಧಿಸದಂತೆ ಬಿಜೆಪಿ, ಆರ್.ಎಸ್.ಎಸ್ನಿಂದ ಯಾವುದೇ ಒತ್ತಡ ಇಲ್ಲ,ನನಗೆ ರಾಜಕೀಯ ಗೊತ್ತಿಲ್ಲ, ಹಿಂದುತ್ವದ ವಿಚಾರಧಾರೆ ಇರುವ ವ್ಯಕ್ತಿ,ನಾನು ಬಕೆಟ್ ಹಿಡಿದು ಡೋಂಗಿ ಹಿಂದುತ್ವ ಬೆಂಬಲಿಸಿದ್ರೆ ಎಲ್ಲೋ ಹೋಗ್ತಾ ಇದ್ದೆ ಎಂದು ಹೇಳಿದ್ದಾರೆ.
ಕಾರವಾರ, ಮಂಗಳೂರು ಮತ್ತು ಉಡುಪಿಯ ಐದು ಕ್ಷೇತ್ರದಲ್ಲಿ ಶ್ರೀರಾಮ ಸೇನೆ ಸ್ಪರ್ಧೆ ಮಾಡುತ್ತೆ ನನಗೆ ಬಿಜೆಪಿಯಲ್ಲಿ ಇರುವವರೇ ಸಹಕಾರ ಕೊಡ್ತೀವಿ ಹೇಳಿದ್ದಾರೆನನ್ನತ್ರ ದುಡ್ಡಿಲ್ಲ, ಬಾಡಿಗೆ ಮನೆಯಲ್ಲಿ ನಾನು ಇರುವವನು ಬಿಜೆಪಿ ಟಿಕೆಟ್ ಕೊಟ್ಟರೂ ಹೋಗಲ್ಲ, ಅದು ಮುಗಿದ ಅಧ್ಯಾಯ ,ಕಾರ್ಕಳ ಶಾಸಕರು ಮುಂದಿನ ಮುಖ್ಯಮಂತ್ರಿ ಅಂತೆಲ್ಲಾ ಚರ್ಚೆಗಳಾಗ್ತಾ ಇದೆ ,ಹೀಗಾಗಿ ಬಿಜೆಪಿಯಲ್ಲಿ ಇರೋ ಕೆಲ ಮುಖ್ಯಮಂತ್ರಿ ಆಕಾಂಕ್ಷಿಗಳು ನನಗೆ ಪರೋಕ್ಷ ಬೆಂಬಲ ಕೊಡ್ತಾ ಇದಾರೆ ಎಂದು ಹೇಳಿದರು.
ಈಗಾಗಲೇ ಬಿಜೆಪಿಯಲ್ಲಿ ಸಿಎಂ, ಸಚಿವರಾಗಲು ಸೂಟ್ ಹೊಲಿಸಿ ನಿಂತವರು ಇದ್ದಾರೆ,ಅವರೆಲ್ಲಾ ನನಗೆ ತನು-ಮನ-ಧನದ ಸಹಕಾರ ಕೊಡ್ತೀವಿ ಅಂದಿದಾರೆ.