Monday, November 3, 2025
Flats for sale
Homeಜಿಲ್ಲೆಮಂಗಳೂರು : ಕಳೆದುಕೊಂಡ 233 ಮೊಬೈಲ್ ಫೋನ್ ಗಳನ್ನು CEIR Portal ಮುಖಾಂತರ ಪತ್ತೆಹಚ್ಚಿ ವಾರಸುದಾರರಿಗೆ...

ಮಂಗಳೂರು : ಕಳೆದುಕೊಂಡ 233 ಮೊಬೈಲ್ ಫೋನ್ ಗಳನ್ನು CEIR Portal ಮುಖಾಂತರ ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸಿದ ಪೊಲೀಸರು..!

ಮಂಗಳೂರು : CEIR Portal ಮುಖಾಂತರ ಸೆ ೧೫ ರಿಂದ ಆ . ೩೦ ರವರೆಗೆ ದೂರುದಾರರ 233 ಮೊಬೈಲ್ ಫೋನ್ ಗಳನ್ನೂ ಪೊಲೀಸರು ಪತ್ತೆ ಹಚ್ಚಿ ವಾರಸುದಾದರಿಗೆ ವಿತರಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೆ .15 ರಿಂದ ಆ.೩೦ ೨೦೨೫ ರವರೆಗೆ ಸಾರ್ವಜನಿಕರು ಕಳೆದುಕೊಂಡಿರುವ 233 ಮೊಬೈಲ್ ಫೋನ್ ಗಳನ್ನು CEIR Portal ಮುಖಾಂತರ ಪತ್ತೆಮಾಡಲಾಗಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು ಪತ್ತೆಮಾಡಲಾದ ೨೩೩ ಮೊಬೈಲ್ ಫೋನ್ ಯಾವ್ಯಾವ ಠಾಣೆಗೆ ಸಂಬಂಧ ಪಟ್ಟಿದೆ ಎಂದು ತಿಳಿಸಿದ್ದಾರೆ.

ಮೊಬೈಲ್ ಫೋನ್ ಕಳೆದುಕೊಂಡವರು ತಟ್ಟನೆ CEIR Portal ಗೆ ತಮ್ಮ ಮೊಬೈಲ್ ನಂಬರ್ ಹಾಗೂ ಸೀರಿಯಲ್ ನಂಬರ್ ನ್ನು ನಮೂಸಿದರೆ ಮೊಬೈಲ್ ಫೋನ್ ಬಗ್ಗೆ ಮಾಹಿತಿ ದೊರೆಯುತ್ತೆ ಅದನ್ನು ತಕ್ಷಣ ಮಾಡಬೇಕೆಂದು ತಿಳಿಸಿದ್ದಾರೆ.ಒಟ್ಟು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ೧೬ ಪೊಲೀಸ್ ಠಾಣೆಗಳಲ್ಲಿ ದಾಖಲಾದ ದೂರಿನ ಮಾಹಿತಿಯ ಮೇರೆಗೆ ವಾರಸುದಾರರಿಗೆ ಫೋನ್ ಗಳನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular