Friday, March 13, 2026
Flats for sale
Homeಜಿಲ್ಲೆಮಂಗಳೂರು : ಕಲಾವಿದ ಕೈಚಳಕಕ್ಕೆ ಮೋದಿ ಫಿದಾ, ರೋಡ್ ಶೋ ವೇಳೆ ಪ್ರದರ್ಶಿಸಿದ ಚಿತ್ರವನ್ನು ಕೇಳಿ...

ಮಂಗಳೂರು : ಕಲಾವಿದ ಕೈಚಳಕಕ್ಕೆ ಮೋದಿ ಫಿದಾ, ರೋಡ್ ಶೋ ವೇಳೆ ಪ್ರದರ್ಶಿಸಿದ ಚಿತ್ರವನ್ನು ಕೇಳಿ ಪಡೆದ ನರೇಂದ್ರ ಮೋದಿ!

ಮಂಗಳೂರು : ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಹರಸಾಹಸ ಪಡುತಿದ್ದು ಪ್ರಚಾರದ ಭರಾಟೆ ಜೋರಾಗಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಕಡಲನಗರಿ ಮಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಮಂಗಳೂರಿನಲ್ಲಿ ಜನಸಾಗರವೇ ತುಂಬಿತ್ತು ಅಂತಹದರಲ್ಲಿ ರೋಡ್ ಶೋ ವೇಳೆ ಯುವ ಕಲಾವಿದರೊಬ್ಬರು ಬಿಡಿಸಿದ ತಮ್ಮ ಫೋಟೋವನ್ನು ಜನಜಂಗುಳಿಯ ನಡುವೆ ತೋರಿಸಿದ್ದಾನೆ ಜನಸಾಗರದ ನಡುವೆಯೂ ನೋಡಿದ ಮೋದಿ ಕಲಾವಿದ ಬಿಡಿಸಿದ ಫೋಟೋವನ್ನು ಪ್ರಧಾನಿ ಮೋದಿ ಪಡೆದುಕೊಂಡಿದ್ದಾರೆ.

ತೊಕ್ಕೊಟ್ಟು ನಿವಾಸಿ ಯುವ ಚಿತ್ರ ಕಲಾವಿದ ಕಿರಣ್ ಎಂಬುವವರು ಮೋದಿ ಗೆ ಕೊಡಲೆಂದೇ ರೋಡ್ ಷೋ ವೇಳೆ 20/24 ಫ್ರೇಮ್ ನ ಮೋದಿಯವರ ಆಯಿಲ್ ಪೈಂಟ್ ಚಿತ್ರ ತಾನು ಬಿಡಿಸಿ ಚಿತ್ರವನ್ನು ಪ್ರದರ್ಶಿಸಿದ್ದಾರೆ,ಫೋಟೋ ಗೆ ಮೆಚ್ಚುಗೆ ಸೂಚಿಸಿ ಫೋಟೋ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಎಸ್ ಪಿ ಜಿ ಅಧಿಕಾರಿಗಳ ಬಳಿ ಫೋಟೋ ಪಡೆಯುವಂತೆ ಸೂಚನೆ ನೀಡಿದ್ದಾರೆ. ಕಲಾವಿದ ಕಿರಣ್ ರವರ ಫೋಟೋ ಮೋದಿ ಸ್ವೀಕರಿಸಿರೋದಕ್ಕೆ ಕಿರಣ್ ಖುಷಿ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular