ಮಂಗಳೂರು : ಕರಾವಳಿ ಭಾಗದಲ್ಲಿ ಕೇರಳ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರ ವಿಫಲಗೊಂಡಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಮಂಗಳೂರಿನಲ್ಲಿ ಹೇಳಿದ್ದಾರೆ
ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ ಅವರು ಮಾತನಾಡಿದ್ದು ಮಂಗಳೂರು ಜನ ಮುಂಬೈ ದುಬೈ ಬೆಂಗಳೂರು ಹೋಗುತ್ತಾರೆ
ಇಲ್ಲಿನ ಪ್ರಕೃತಿ ಸಂಪತ್ತು ಸರಿಯಾಗಿ ಬಳಸಿಕೊಂಡಿಲ್ಲ,ಇಲ್ಲಿನ ಎಲ್ಲಾ ಶಾಸಕರ ಜೊತೆ ಮಾತನಾಡಿದ್ದೇನೆ,ಬಹಳ ಆಸಕ್ತಿ ತೋರಿಸಿದ್ದಾರೆ ಟೂರಿಸಂ ಪಾಲಿಸಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಇಲ್ಲಿಗೆ ಏನಾದರೂ ವಿಶೇಷ ಯೋಜನೆ ಮಾಡಬೇಕು, ಬಹಳ ಜನ ವಿದೇಶ ಮುಂಬೈ ಬೆಂಗಳೂರು ಉದ್ಯಮಿಗಳು ಸ್ವಂತ ಊರಿಗೆ ಬರಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಇದಕ್ಕೆ ಸಹಕಾರ ಕೊಡುತ್ತೇವೆ ಹೂಡಿಕೆ ಮಾಡುತ್ತೇವೆ ಎಂದಿದ್ದಾರೆ ಎಂದರು.
ಇಲ್ಲಿನ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಯಾಗುತ್ತದೆ,ಇಲ್ಲಿನ ಯುವಕರು ಪ್ರಜ್ಞಾವಂತರಿದ್ದಾರೆ,ವಿದೇಶಗಳಿಗೆ ಉದ್ಯೋಗಕ್ಕೆ ಹೋಗುವುದರ ಬದಲು ಇಲ್ಲೇ ಉದ್ಯೋಗ ಸೃಷ್ಟಿಯಾಗುತ್ತದೆ ಈ ಹಿನ್ನೆಲೆಯಲ್ಲಿ ಕರಾವಳಿಗೆ ಟೂರಿಸಂ ಪಾಲಿಸಿ ಮಾಡುತ್ತೇವೆ ಎಂದು ಹೇಳಿದರು.
ಉದ್ಯಮಿಗಳು,ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ,ಸಮಸ್ಯೆ ಏನಿದೆ ಸರಕಾರ ಯಾವ ರೀತಿ ಸಹಾಯ ಮಾಡಬಹುದು ಪರಿಶೀಲನೆ ಮಾಡ್ತೇವೆ ಖಾಸಗಿ ಸಹಭಾಗಿತ್ವ ಕೂಡ ಬೇಕಾಗುತ್ತೆ, ಉದ್ಯಮಿಗಳು ಜನಪ್ರತಿನಿಧಿಗಳು ಸಹಕಾರ ನೀಡಬೇಕು,ಎಲ್ಲರೂ ಅವರ ಅಭಿಪ್ರಾಯ ತಿಳಿಸಬೇಕು ಇಂದು ಸಿ ಆರ್ ಜೆಡ್, ಡಿಫೆನ್ಸ್ ,ಕೋಸ್ಟಲ್ ಪೊಲೀಸ್ ಎಲ್ಲರನ್ನು ಕರೆದಿದ್ದೇವೆ, ಮಂಗಳೂರಿನಲ್ಲಿ ಒಂದು ಫೈವ್ ಸ್ಟಾರ್ ಹೋಟೆಲ್ ಕೂಡ ಇಲ್ಲ,ಎಲ್ಲವೂ ಆಗ್ಬೇಕು ಎಂದು ಹೇಳಿದ್ದಾರೆ.


