Sunday, February 2, 2025
Flats for sale
Homeಜಿಲ್ಲೆಮಂಗಳೂರು : ಭಾರತೀಯ ಕರಾವಳಿ ಭದ್ರತಾಪಡೆ ದಿನಾಚರಣೆ,ರಾಜ್ಯಪಾಲ ತಾವರಚಂದ್ ಗೆಹಲೋಟ್ ಭಾಗಿ,ನಡುಗಡಲಿನಲ್ಲಿ ವೀರ ಕರಾವಳಿ ಭದ್ರತಾ...

ಮಂಗಳೂರು : ಭಾರತೀಯ ಕರಾವಳಿ ಭದ್ರತಾಪಡೆ ದಿನಾಚರಣೆ,ರಾಜ್ಯಪಾಲ ತಾವರಚಂದ್ ಗೆಹಲೋಟ್ ಭಾಗಿ,ನಡುಗಡಲಿನಲ್ಲಿ ವೀರ ಕರಾವಳಿ ಭದ್ರತಾ ಪಡೆಯ ಶಕ್ತಿ ಪ್ರದರ್ಶನ ..!

ಮಂಗಳೂರು : ದೇಶಗಳು ಹಾಗೂ ರಾಷ್ಟ್ರಗಳ ನಡುವೆ ಸಂಪರ್ಕ ಸಾಧಿಸಲು ಇರುವ ಕೊಂಡಿಯಲ್ಲಿ ಸಮುದ್ರಮಾರ್ಗವು ಒಂದಾಗಿದ್ದು, ಇದರ ಮೂಲಕ ಶತ್ರು ರಾಷ್ಟ್ರಗಳು ಹಾಗೂ ದೇಶಗಳು ದಾಳಿ ಮಾಡುತ್ತವೆ. ಹೀಗಾಗಿ ಸಮುದ್ರ ತೀರದಲ್ಲಿ ಭದ್ರತೆ ನೀಡಿ ದೇಶದ ರಕ್ಷಣೆ ಮಾಡುವಲ್ಲಿ ಭಾರತೀಯ ಕರಾವಳಿ ಭದ್ರತಾ ಪಡೆಗಳ ಪಾತ್ರವು ಅಗಾಧವಾದದ್ದು. ಭಾರತೀಯ ಕರಾವಳಿ ಭದ್ರತಾ ಪಡೆಗಳ ಕಾರ್ಯಕವೈಖರಿಯನ್ನು ನೆನಪಿಸಿಕೊಳ್ಳಲು ಭಾರತೀಯ ಕರಾವಳಿ ಭದ್ರತಾ ಪಡೆ ದಿನ ಮೀಸಲಿಡಲಾಗಿದ್ದು, ಪ್ರತಿ ವರ್ಷ ಫೆಬ್ರವರಿ 1 ರಂದು ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರತಿ ವರ್ಷದಂತೆ ಫೆಬ್ರವರಿ 1 ರಂದು ಭಾರತೀಯ ಕೋಸ್ಟ್ ಗಾರ್ಡ್ ದಿನವನ್ನು ಇಂದು ಕರಾವಳಿಯಲ್ಲಿ ಆಚರಿಸಲಾಯಿತು. ರಾಜ್ಯಪಾಲರು ಹಾಗೂ ಸ್ಪೀಕರ್ ಯು.ಟಿ ಖಾದರ್ ರವರು ಬೆಳಗಿನ ಜಾವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಕೋಸ್ಟ್ ಗಾರ್ಡ್-3 ಡಿಐಜಿ ಪಿ. ಕೆ ಮಿಶ್ರ,ಶಾನವಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಂ.ಎರ್.ಪಿ.ಎಲ್ ಎಂ.ಡಿ ಮುಕುಂದ್ ಶ್ಯಾಮ್ ಪ್ರಸಾದ್ ಕಾಮತ ,ನಗರ ಪೊಲೀಸ್ ಆಯುಕ್ತರು ಅನುಪಮ್ ಅಗರ್ವಾಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಭಾರತೀಯ ಕೋಸ್ಟ್ ಗಾರ್ಡ್ 1 ರಂದು ಫೆಬ್ರವರಿ 1977 ರಂದು ಸ್ಥಾಪಿಸಲಾಗಿದ್ದು . ಕರಾವಳಿ ಭದ್ರತಾ ಪಡೆ ಜವಾಬ್ದಾರಿಗಳಲ್ಲಿ ಕಡಲಾಚೆಯ ಭದ್ರತೆ, ಸಾಗರ ಸುರಕ್ಷತೆ, ಕರಾವಳಿ ಭದ್ರತೆ ಸೇರಿವೆ. ಇವೆಲ್ಲವುಗಳ ಮೂಲಕ ಭಾರತೀಯ ಕರಾವಳಿ ರಕ್ಷಣಾ ಪಡೆ ಭಾರತದ ಆರ್ಥಿಕತೆಗೆ ಅಮೂಲ್ಯವಾದ ಸೇವೆಗಳನ್ನು ನೀಡುತ್ತಿದೆ ಎಂದು ಕರಾವಳಿ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಭಾರತೀಯ ಕರಾವಳಿ ಭದ್ರತಾ ಪಡೆ ದಿನದ ಮುಖ್ಯ ಉದ್ದೇಶವು ಸಮುದ್ರದ ಮೂಲಕ ಸರಕುಗಳ ಕಳ್ಳಸಾಗಣೆ ತಡೆಯಲು, ಕಡಲ್ಗಳ್ಳತನವನ್ನು ಎದುರಿಸಲು ಮತ್ತು ಕರಾವಳಿ ಪ್ರದೇಶಗಳ ಭದ್ರತೆ ಮತ್ತು ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡಲು ಈ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು .

18 ಆಗಸ್ಟ್ 1978 ರಂದು ಸಂಸತ್ತು ಅಧಿಕೃತ ಮಾನ್ಯತೆಯನ್ನು ನೀಡಿದ್ದು ಅಂದಿನಿಂದ , ಪ್ರತಿ ವರ್ಷ ಫೆಬ್ರವರಿ 1 ರಂದು ಭಾರತೀಯ ಕರಾವಳಿ ಭದ್ರತಾ ಪಡೆ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನೌಕೆ ಐ.ಸಿ.ಜಿ.ಯಸ್ ವರಹದ ಜೊತೆ ಪತ್ರಕರ್ತರು,ಅಧಿಕಾರಿಗಳು 20 ನಾಟಿ ಮೈಲು ದೂರದಷ್ಟು ನೌಕೆಯಲ್ಲಿ ಚಲಿಸಿ ನಡುಗಡಲಿನಲ್ಲಿ ನೌಕಾಸೇನೆಯ ವೀರ ಸೈನಿಕರ ಅಣುಕು ಪ್ರದರ್ಶನ ವೀಕ್ಷಿಸಿದರು. ಈ ಸಂದರ್ಭದಲ್ಲಿ ಐ.ಸಿ.ಜಿ.ಯಸ್ ಸಾವಿತ್ರಿ ಭಾಯ್ ಪುಲೆ, ಐ.ಸಿ.ಜಿ.ಯಸ್ ಅಮರ್ಥ್ಯ ಚಾರ್ಲಿ 402,448 ಮಂಗಳೂರು ನೌಕೆ ಹಾಗೂ ಎಲೆಕ್ಯಾಪ್ಟಾರ್ ಅನುಕುಪ್ರದರ್ಶನದಲ್ಲಿ ಕಾರ್ಯಾಚರಿಸಿದ್ದವು.

ಭಾರತೀಯ ಕರಾವಳಿ ಭದ್ರತಾ ಪಡೆ ದಿನವು ದೇಶದ ಕಡಲ ಗಡಿಗಳನ್ನು ರಕ್ಷಿಸುವಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ವೀರ ಸೈನಿಕರಿಗೆ ಗೌರವ ಸಲ್ಲಿಸಲು ನಮಗೆ ಅವಕಾಶವನ್ನು ಒದಗಿಸುತ್ತದೆ. ಅವರ ಸಮರ್ಪಣೆ ಮತ್ತು ಸೇವೆಯು ದೇಶದ ಭದ್ರತೆ ಮತ್ತು ಸಮೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಭಾರತೀಯ ಕೋಸ್ಟ್ ಗಾರ್ಡ್ ಭಾರತದ ಕಡಲ ವಲಯಗಳಲ್ಲಿ ಗಸ್ತು ತಿರುಗುತ್ತದೆ ಮತ್ತು ಕಳ್ಳಸಾಗಣೆ ಮತ್ತು ಕಡಲ್ಗಳ್ಳತನದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುತ್ತಿದೆ ಎಂದು ಅಣುಕು ಪ್ರದರ್ಶನದ ವೇಳೆ ಮನವರಿಕೆಯಾಯಿತು. ಕಡಲ ವಿಪತ್ತುಗಳ ಸಮಯದಲ್ಲಿ, ಕೋಸ್ಟ್ ಗಾರ್ಡ್ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ, ಲೆಕ್ಕವಿಲ್ಲದಷ್ಟು ಜೀವಗಳನ್ನು ಉಳಿಸುತ್ತದೆ. ತೈಲ ಸೋರಿಕೆಯಂತಹ ಘಟನೆಗಳನ್ನು ನಿಯಂತ್ರಿಸುವುದು ಸೇರಿದಂತೆ ಸಮುದ್ರ ಪರಿಸರವನ್ನು ರಕ್ಷಿಸುವಲ್ಲಿ ಕರಾವಳಿ ಭದ್ರತಾ ಪಡೆ ಪ್ರಮುಖ ಪಾತ್ರ ವಹಿಸುತ್ತದೆ. ಕರಾವಳಿ ಪ್ರದೇಶಗಳ, ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಮೇಲ್ವಿಚಾರಣೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ಕರಾವಳಿ ಭದ್ರತಾ ಪಡೆ ಆದ್ಯತೆಗಳಲ್ಲಿ ಒಂದಾಗಿದೆ ಎಂದು ನೌಕಾಪಡೆಯ ಅಧಿಕಾರಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular