ಮಂಗಳೂರು : ಕಥೋಲಿಕ್ ಸಭಾ ಕೂಳೂರು ಘಟಕದ ವತಿಯಿಂದ 7ನೇ ತರಗತಿಯಿಂದ ಪಿಯುಸಿ ವರೆಗಿನ ಮಕ್ಕಳಿಗೆ ಹಾಗೂ ಯುವಜನರಿಗೆ ಸಿವಿಲ್ ಸರ್ವಿಸ್, ಸರ್ಕಾರಿ ಕ್ಷೇತ್ರದಲ್ಲಿ ಉನ್ನತ ಹುದ್ದೆಗೆ ಐಎಎಸ್, ಐಪಿಎಸ್ ಇಂತಹ ಕೆಲಸದಲ್ಲಿ ಸ್ಥಾನಮಾನಗಳಿಸಲು ಜಾಗೃತಿ ಮತ್ತು ತಯಾರಿ ಮಾಡುವ ಸಲುವಾಗಿ ಕಥೋಲಿಕ್ ಸಭಾ ಎಪಿಸ್ಕೋಪಲ್ ಸಿಟಿ ವಲಯ ಮತ್ತು ಕಥೋಲಿಕ್ ಸಭಾ ಕೂಳೂರು ಘಟಕದ ವತಿಯಿಂದ ಏಳರಿಂದ ಪಿಯುಸಿವರೆಗಿನ ಹಾಗೂ ಪದವಿ ಮಕ್ಕಳಿಗೆ ಪ್ರೇರಣ್ ಕ್ಯಾಚ್ ದೆಮ್ ಯಂಗ್ ಕಾರ್ಯಕ್ರಮವನ್ನು ಕೂಳೂರು ಚರ್ಚಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.





ಈ ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮ ಗುರುಗಳು ಹಾಗೂ ಕಥೋಲಿಕ್ ಸಭಾ ಕೂಳೂರು ಘಟಕದ ಆತ್ಮಿಕ ನಿರ್ದೇಶಕರಾದ ವಂl ವಿಕ್ಟರ್ ವಿಜಯ್ ಲೋಬೊ, ಎಪಿಸ್ಕೋಪಲ್ ಸಿಟಿ ವಲಯದ ಅಧ್ಯಕ್ಷಿ ಐಡ ಪುರ್ಟಾಡೊ, ವಲಯದ ನಿಕಟ ಪೂರ್ವ ಅಧ್ಯಕ್ಷ ಸ್ಟೀವನ್ ರೊಡ್ರೀಗಸ್, ಕಾರ್ಯದರ್ಶಿ ರೋಹನ್ ಸಿಕ್ವೇರಾ, ವಲಯದ ಇತರ ಪದಾಧಿಕಾರಿಗಳು, ವಲಯ ಸಂಚಾಲಕರಾದ ದೀಪಕ್ ಡಿಸೋಜಾ, ಸಂಪನ್ಮೂಲ ವ್ಯಕ್ತಿಯರಾದ ಶ್ರೀಮತಿ ಮ್ಯೂರಲ್ ಕುಟಿನ್ಹ, ಘಟಕದ ಅಧ್ಯಕ್ಷರಾದ ರೋವಿನ್ ಡಿ ಸೋಜಾ, ಕಾರ್ಯದರ್ಶಿ ಸವಿತಾ ವೇಗಸ್, ಘಟಕದ ಸಂಚಾಲಕರಾದ ಕ್ಲೇವರ್ ಡಿ ಸೋಜಾ ಹಾಜರಿದ್ದರು. ಈ ಕಾರ್ಯಕ್ರಮವನ್ನು ವಂl ಗುರುಗಳಾದ ವಿಕ್ಟರ್ ವಿಜಯ್ ಲೋಬೊರವರು ಉದ್ಘಾಟಿಸಿ ನಮ್ಮ ಯುವಜನರಿಗೆ ಸರಕಾರಿ ಕೆಲಸ ಮತ್ತು ಶಿಬಿರದ ಮಹತ್ವವನ್ನು ವಿವರಿಸಿದರು.
ಈ ಶಿಬಿರದಲ್ಲಿ 82 ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ 182 ಜನ ಹಾಜರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮಾನ್ ಕ್ಲೇವರ್ ಡಿಸೋಜರವರು ನಿರೂಪಿಸಿದರು. ಘಟಕದ ಅಧ್ಯಕ್ಷ ರೋವಿನ್ ಡಿಸೋಜರವರು ವಂದಿಸಿದರು.