ಮಂಗಳೂರು ; ಖ್ಯಾತ ತೆಲುಗು ನಟ ಹಾಗೂ ಇನ್ನಿತರ ಭಾಷೆಯಲ್ಲೂ ನಟಿಸಿದ ಪ್ರಭಾಸ್ ಅವರು ಜನವರಿ 12, ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅಸ್ರಣ್ಣರು ಅವರನ್ನು ಸ್ವಾಗತಿಸಿದರು. ಹೊಂಬಾಳೆ ಫಿಲಂಸ್ ಮಾಲೀಕ ಮತ್ತು "ಸಾಲಾರ್" ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ಪ್ರಭಾಸ್ ಜೊತೆಗಿದ್ದರು.


