Wednesday, March 12, 2025
Flats for sale
Homeಸಿನಿಮಾಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ ಭೇಟಿ,ಕಾಂತಾರ ಚಾಪ್ಟರ್ -2...

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ ಭೇಟಿ,ಕಾಂತಾರ ಚಾಪ್ಟರ್ -2 ಚಿತ್ರದ ಯಶಸ್ಸಿಗೆ ವಿಶೇಷ ಪೂಜೆ..!

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಕುಟುಂಬ ಸಮೇತವಾಗಿ ನಟ ರಿಷಬ್ ಶೆಟ್ಟಿ ಇಂದು ಭೇಟಿನೀಡಿದ್ದಾರೆ.ರಿಷಬ್ ಶೆಟ್ಟಿಯವರು ಪತ್ನಿ ಮತ್ತು ಮಗನೊಂದಿಗೆ ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ‌ ಸಲ್ಲಿಸಿದ್ದಾರೆ. ಕ್ಷೇತ್ರದ ವತಿಯಿಂದ ಪ್ರಸಾದ,ಶೇಷವಸ್ತ್ರ ನೀಡಿ ಗೌರವಿಸಿದ್ದು ಕಟೀಲು ದೇವಿ ದುರ್ಗಾಪರಮೇಶ್ವರಿಯ ದರ್ಶನ ಪಡೆದಿದ್ದಾರೆ.

ಕಾಂತಾರ ಚಾಪ್ಟರ್ 2 ಚಿತ್ರೀಕರಣ ಭಾಗಶಃ ಮುಗಿದಿರೋ ಹಿನ್ನೆಲೆಯಲ್ಲಿ ಭೇಟಿನೀಡಿದ್ದು ಚಿತ್ರದ ಯಶಸ್ಸಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದು ಚಿತ್ರೀಕರಣ ಕೊನೆಯ ಹಂತದಲ್ಲಿದೆ ಅಕ್ಟೋಬರ್ 2 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಚಿಂತನೆ ಮಾಡಲಾಗಿದೆ ಈ ಹಿನ್ನೆಲೆ ಕುಟುಂಬ ಸಮೇತರಾಗಿ ಟೆಂಪಲ್‌ ರನ್ನ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನ‌ ಚಿತ್ರೋತ್ಸವದಲ್ಲಿ ಡಿಕೆಶಿ ವಾರ್ನಿಂಗ್ ವಿಚಾರ ಪ್ರಸ್ತಾಪಿಸಿದಾಗ ಚಿತ್ರೋತ್ಸವಕ್ಕೆ ಆಹ್ವಾನ‌ ಬಂದ ಬಗ್ಗೆ ಪ್ರತಿಕ್ರಿಯಿಸಿದ್ದು ನಾನು ಚಿತ್ರದ ಶೂಟಿಂಗ್ ನಲ್ಲಿದ್ದೇನೆ ಆ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular