Friday, November 22, 2024
Flats for sale
Homeಜಿಲ್ಲೆಮಂಗಳೂರು ; ಕಂತು ಬಾಕಿ ಇದ್ದ ಗ್ರಾಹಕನ ಮೇಲೆ ಖಾಸಗಿ ಬ್ಯಾಂಕ್ ನ 20 ಸಿಬ್ಬಂದಿಗಳಿಂದ...

ಮಂಗಳೂರು ; ಕಂತು ಬಾಕಿ ಇದ್ದ ಗ್ರಾಹಕನ ಮೇಲೆ ಖಾಸಗಿ ಬ್ಯಾಂಕ್ ನ 20 ಸಿಬ್ಬಂದಿಗಳಿಂದ ಹಲ್ಲೆ,ದೂರು ದಾಖಲು…!

ಮಂಗಳೂರು ; ಇತ್ತೀಚಿನ ದಿನಗಳಲ್ಲಿ ಖಾಸಗಿ ಬ್ಯಾಂಕ್ ಸಿಬ್ಬಂದಿಗಳ ಉಪಟಳ ಹೆಚ್ಚಾಗಿದ್ದು ಇದಕ್ಕೆ ಪೋಲಿಸ್ ಇಲಾಖೆನೂ ಸಾಥ್ ನೀಡುವಂತಹ ಅನೇಕ ಘಟನೆಗಳು ನಡೆಯುತ್ತಲೇ ಇದೆ. ಗಾಡಿ ಸೀಜ್ ಮಾಡುವ ನೆಪದಲ್ಲಿ ಗ್ರಾಹಕರಿಗೆ ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆ ಮಾಡಿದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.

ಶನಿವಾರ ಜು 27 ರಂದು ಯತೀರಾಜ್ ಎಂಬುವವರು ತನ್ನ ದ್ವಿಚಕ್ರ ವಾಹನವನ್ನು ಖಾಸಗಿ ಬ್ಯಾಂಕ್ ಸಿಬ್ಬಂದಿ ವಶಪಡಿಸಿಕೊಂಡ ಹಿನ್ನೆಲೆ ವಾಹನವನ್ನು ಹಿಂಪಡೆಯಲು ಸಾಲ ಮರುಪಾವತಿಸಲು ಹೋದ ಸಂದರ್ಭದಲ್ಲಿ ಸಾಲದ ಬಗ್ಗೆ ಮಾಹಿತಿ ಕೇಳಿದಾಗ ಬ್ಯಾಂಕ್ ಸಿಬ್ಬಂದಿ ಗ್ರಾಹಕನಲ್ಲಿ ಅಸಭ್ಯವಾಗಿ ವರ್ತಿಸುವುದಲ್ಲದೆ ಗ್ರಾಹಕನ ಪೊಷಕರ ವಿರುದ್ಧ ಅವ್ಯಾಚ ಶಬ್ದಗಳಿಂದ ನಿಂದಿಸಿ ಸುಮಾರು 20 ಸಿಬ್ಬಂದಿ ಏಕಾಏಕಿ ಹಲ್ಲೆ ನಡೆಸಿದ್ದಾರೆಂದು ದೂರುನೀಡಿದ್ದಾರೆ.ಜಿಲ್ಲೆಯಲ್ಲಿ ಇಂತಹ ಘಟನೆಗಳು ಅತಿಹೆಚ್ಚು ನಡೆಯುತ್ತಿದ್ದು ಸಂಬಂಧ ಪಟ್ಟ ಇಲಾಖೆಯು ಮೌನಮುರಿದಿದೆ.

ಈ ಬಗ್ಗೆ ಠಾಣೆಗೆ ಹೋದರೂ ಪೋಲಿಸರು ಸರಿಯಾಗಿ ಸ್ಪಂದಿಸದ ಹಿನ್ನೆಲೆ ನಾನು ಈ ಬಗ್ಗೆ ಸ್ಪೀಕರ್ ಯು.ಟಿ ಖಾದರ್ ಹಾಗೂ ಸಂಸದ ಕ್ಯಾಪ್ಟನ್‌ ಬ್ರೀಜೆಶ್ ಚೌಟರಿಗೂ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು ಪೋಲಿಸರ ಮಧ್ಯಸ್ಥಿಕೆ ವಹಿಸಿದರೂ ಸಮಸ್ಯೆಬಗೆಹರಿಯಲಿಲ್ಲವೆಂದು ಹಾಗೂ ಮನೆಗೆ ಬಂದು ಧಮ್ಕಿ ಕೊಡುವುದರಿಂದ ನನ್ನ ಪೋಷಕರು ಭಯಬೀತರಾಗಿದ್ದು ನ್ಯಾಯಲಯದ ಮೊರೆ ಹೋಗುತ್ತಿದ್ದೆನೆಂದು ತಿಳಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಖಾಸಗಿ ಬ್ಯಾಂಕ್ ಸಿಬ್ಬಂದಿಗಳು ಹಲ್ಲೆ ನಡೆಸಿ ಹಲವಾರು ಕುಟುಂಬಗಳು ಪಲಾಯನವಾದ ಘಟನೆ ಹಾಗೂ ಹಲವರು ಆತ್ಮಹತ್ಯೆ ಮಾಡಿದಂತಹ ಘಟನೆ ಅತಿ ತಿಹೆಚ್ಚಾಗಿದ್ದು ಖಾಸಗಿ ಬ್ಯಾಂಕಗಳ ಕಿರುಕುಳದಿಂದ ಇವರ ದರ್ಬಾರಿಗೆ ಹಲವರು ಪ್ರಾಣತೆತ್ತಿದ್ದಾರೆ. ಬಡಜನರ ಮೇಲೆ ನಿರಂತಹ ಇಂತಹ ದೌರ್ಜನ್ಯ ನಡೆಯುತ್ತಿದ್ದು ಭವಿಷ್ಯದಲ್ಲಿ ಇಂತಹ ಘಟನೆಗಳು ಯಾರೀಗೂ ಸಂಭವಿಸಬಾರದೆಂದು ನೊಂದ ಸ್ಕೂಟರ್ ಚಾಲಕ ಯತೀರಾಜ್ ಶೆಟ್ಟಿ ನ್ಯಾಯಕ್ಕಾಗಿ ಆಳಲುತೊಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular