Sunday, June 1, 2025
Flats for sale
Homeಜಿಲ್ಲೆಮಂಗಳೂರು : ಕಂಕನಾಡಿ ಬಳಿಯ ಮ್ಯಾಕ್ ಮಾಲ್‌ನಲ್ಲಿ ರಾಯಲ್‌ಓಕ್ ಫರ್ನಿಚರ್ ನ 2 ನೇ ಹೊಸ...

ಮಂಗಳೂರು : ಕಂಕನಾಡಿ ಬಳಿಯ ಮ್ಯಾಕ್ ಮಾಲ್‌ನಲ್ಲಿ ರಾಯಲ್‌ಓಕ್ ಫರ್ನಿಚರ್ ನ 2 ನೇ ಹೊಸ ಮಳಿಗೆ ಉದ್ಘಾಟನೆ..!

ಮಂಗಳೂರು : ಭಾರತದ ನಂ.1 ಫರ್ನಿಚರ್ ಬ್ರಾಂಡ್ ಆಗಿರುವ ರಾಯಲ್‌ಓಕ್ ಫರ್ನಿಚರ್ ಸಂಸ್ಥೆಯು ಮಂಗಳೂರಿನ ಮ್ಯಾಕ್ ಮಾಲ್‌ನಲ್ಲಿ ಹೊಸ ಮಳಿಗೆಯನ್ನು ಇಂದು ಉದ್ಘಾಟಿಸಿದರು . ಈ ಮಳಿಗೆಯು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಯಲ್‌ಓಕ್ ನ 59ನೇ ಮಳಿಗೆಯಾಗಿದೆ.

10,000 ಚದರ ಅಡಿಗಳಷ್ಟು ವಿಶಾಲವಾದ ವಿಸ್ತೀರ್ಣವನ್ನು ಹೊಂದಿರುವ ಈ ಮಳಿಗೆಯಲ್ಲಿ ಲಿವಿಂಗ್ ರೂಮ್, ಬೆಡ್ ರೂಮ್, ಡೈನಿಂಗ್ ಏರಿಯಾ, ಸ್ಟಡಿ & ಆಫೀಸ್, ಔಟ್ ಡೋರ್, ಹೋಮ್ ಡೆಕೋರ್, ಮ್ಯಾಟ್ರಿಸ್‌ಗಳು ಸೇರಿದಂತೆ ಮನೆಯ ಪ್ರತಿಯೊಂದು ವಿಭಾಗಕ್ಕೆ ಸಂಬಂಧಿಸಿದ ಫರ್ನಿಚರ್ ಗಳ ವ್ಯಾಪಕ ಶ್ರೇಣಿಯನ್ನು ಪ್ರದರ್ಶಿಸಲಾಗುತ್ತದೆ ಮಂಗಳೂರಿನ ಮಂದಿ ಈಗ ತಮ್ಮ ಸಮೀಪದಲ್ಲಿಯೇ ಸ್ಟೈಲಿಶ್ ಆದ, ಸ್ಮಾರ್ಟ್ ಆದ ಮತ್ತು ತಮ್ಮ ಅಗತ್ಯಕ್ಕೆ ಸೂಕ್ತವಾದ ಫರ್ನಿಚರ್ ಗಳನ್ನು ಕೈಗೆಟುಕುವ ಬೆಲೆಯಲ್ಲಿ ಕಂಡುಕೊಳ್ಳಬಹುದು ಎಂದು ರಾಯಲ್ ಓಕ್ ಇಂಕಾರ್ಪೊರೇಷನ್ ಪ್ರೈವೇಟ್ .ಲಿಮಿಟೆಡ್ ಚೇರ್ ಮ್ಯಾನ್ ವಿಜಯ್ ಸುಬ್ರಮಣಿಯನ್ ತಿಳಿಸಿದ್ದಾರೆ.

ಈ ಮಳಿಗೆಯಲ್ಲಿ ವಿಶೇಷವಾದ ‘ಕಂಟ್ರಿ ಸ್ಟೋರ್’ ವಿಭಾಗವಿದ್ದು, ಇಲ್ಲಿ ಅಮೆರಿಕಾ, ಇಟಲಿ, ಮಲೇಷಿಯಾ ಮತ್ತು ಭಾರತದ ಉತ್ತಮ ಮತ್ತು ಅನನ್ಯ ಫರ್ನಿಚರ್ ಗಳನ್ನು ಪ್ರದರ್ಶಿಸಲಾತ್ತದೆ ರಾಯಲ್‌ಓಕ್ ಭಾರತದಾದ್ಯಂತ ಇರುವ ಎಲ್ಲಾ ಮಹಾ ನಗರಗಳು ಮತ್ತು 2ನೇ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಉಪಸ್ಥಿತಿ ಹೊಂದಿದ್ದು ಉದ್ಘಾಟನಾ ಕೊಡುಗೆಯಾಗಿ ಈ ಮಳಿಗೆಯಲ್ಲಿ ವಿವಿಧ ಶಾಪಿಂಗ್ ಗಳ ಮೇಲೆ 14,990 ರೂ. ಮೌಲ್ಯದ ಉಚಿತ ರಿಕ್ಷನರ್ ಗಳನ್ನು ಮತ್ತು 3,000 ರಿಂದ 7.000 ರೂ.ವರೆಗಿನ ಉತ್ಪನ್ನಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ರಾಯಲ್‌ಓಕ್ ನ ಫ್ರಾಂಚೈಸ್ ಆವರೇಷನ್ ಮ್ಯಾನೇಜರ್ ಮಹೇಶ್ ಪಂಡಿತ್ ರವರು ತಿಳಿಸಿದ್ದಾರೆ.

ಬಳಿಕ ಮಾತನಾಡಿದ ರಾಯಲ್‌ಓಕ್ ಫರ್ನಿಚರ್ ನ ಹೆಡ್ ಕಿರಣ್ ಛಾಬ್ರಿಯಾರವರು ಮಂಗಳೂರಿನ ಮಾಲ್ ನಲ್ಲಿ ಇದು ಮೊದಲನೆಯದು ಆದರೆ ಮಂಗೂರಿನಲ್ಲಿ ಇದು ಎರಡನೆಯ ಮಳಿಗೆ ಉದ್ಘಾಟನೆಗೊಂಡಿರುವುದು ನಮಗೆ ಹರ್ಷ ತಂದಿದೆ. ಕರ್ನಾಟಕದಲ್ಲಿ ನಾವು ಈಗ ಸುಮಾರು 60 ಮಳಿಗೆಗಳ ಬಲವಾದ ಜಾಲವನ್ನು ಹೊಂದಿದ್ದೇವೆ. ಈ ಮಳಿಗೆಯಲ್ಲಿ ಮಂಗಳೂರಿನ ಜನರು ಅಂತರರಾಷ್ಟ್ರೀಯ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಮತ್ತು ಇಲ್ಲಿನ ಗ್ರಾಹಕರನ್ನು ಎದುರುಗೊಳ್ಳಲು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮ್ಯಾಕ್ ಇನ್‌ ವಾರಿಯಲ್ಲಿ ಪೈ. ಲಿನ ಶ್ರೀ ಎಂಡಿ ಮೊಹಮ್ಮದ್ ಅರಬಿ ಕೆ ಯವರು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರಾಯಲ್ ಓಕ್ ನ ವಿಎಂ & ಎನ್ಎಎಸ್‌ಓ ಹೆಡ್ ಶ್ರೀ ತಮ್ಮಯ್ಯ ಕೊಟೇರ,ಹೇರಿನ ಮೊಜಿರೋ, ಹಾಗೂ ಇನ್ನಿತರ ಹಲವು ಗಣ್ಯರು ಉಪಸ್ಥಿತರಿದ್ದರು.

ಹೊಸ ಮಳಿಗೆ ವಿಳಾಸ: ಮ್ಯಾಕ್ ಮಾಲ್, 2ನೇ ಮಹಡಿ, ಕಂಕನಾಡಿ, ಮಂಗಳೂರು ದೂರವಾಣಿ 81471 29098

RELATED ARTICLES

LEAVE A REPLY

Please enter your comment!
Please enter your name here

Most Popular