ಮಂಗಳೂರು : ಹೆಡ್ ಕಾನ್‌ಸ್ಟೆಬಲ್ ಮಂಜುನಾಥ ಹೆಗ್ಡೆ (41) ನಾಪತ್ತೆಯಾಗಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
15 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಅವರು ಕಂಕನಾಡಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಆಗಿದ್ದು, ಇತ್ತೀಚೆಗಷ್ಟೇ OOD ಮೇಲೆ CCRB ಘಟಕಕ್ಕೆ ವರ್ಗಾವಣೆಗೊಂಡಿದ್ದರು. ಜನವರಿ 13 ರಂದು, ಅವರು ತಮ್ಮ ಹೊಸ ಪೋಸ್ಟಿಂಗ್‌ಗೆ ಸೇರಲು ಮನೆಯಿಂದ ಹೊರಟಿದ್ದರು. ಆದರೆ ಜನವರಿ 13 ರಂದು ಮಧ್ಯಾಹ್ನದಿಂದ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.
ಮಂಜುನಾಥ ಹೆಗಡೆ 5 ಅಡಿ 6 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ ಮತ್ತು ದುಂಡು ಮುಖ ಹೊಂದಿದ್ದಾರೆ. ಕೊನೆಯದಾಗಿ ನೋಡಿದಾಗ ಅವರು ಕ್ರೀಮ್ ಕಲರ್ ಟಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು ಎಂದು ಅವರ ಪರಿಚಯಿಸ್ಥರು ತಿಳಿಸಿದ್ದಾರೆ.


