ಮಂಗಳೂರು : 2017ರಿಂದ ನೋಂದಣಿಯಾಗಿರುವ ಎಲ್ಲಾ ಖಾಸಗಿ ಸಿಟಿ ಬಸ್ಗಳು ಮುಂದಿನ ತಿಂಗಳೊಳಗೆ ಬಾಗಿಲು ಅಳವಡಿಸಿ, ಈ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಫೆ.28ರಂದು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಸಿ, 2017ರಿಂದ ನೋಂದಣಿಯಾದ ಎಲ್ಲ ಬಸ್ಗಳಿಗೆ ಕಡ್ಡಾಯವಾಗಿ ಬಾಗಿಲು ಹಾಕಬೇಕು ಎಂದು ಕಾನೂನಿನಲ್ಲಿ ಹೇಳಲಾಗಿದೆ. ಎಲ್ಲಾ ಬಸ್ಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ತಿಂಗಳೊಳಗೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಆರ್ಟಿಎ ನಿರ್ದೇಶನದಂತೆ ಬಸ್ ಮಾಲೀಕರು ಅಫಿಡವಿಟ್ ಸಲ್ಲಿಸಬೇಕು.
ಬಸ್ಗಳಿಗೆ ಬಾಗಿಲು ಹಾಕಬೇಕೆಂಬ ಬೇಡಿಕೆಯೂ ಹೆಚ್ಚಿದೆ. ನೆರೆಯ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಬಸ್ಗಳು ಸಹ ಬಾಗಿಲುಗಳನ್ನು ಹೊಂದಿವೆ. ಬೆಂಗಳೂರಿನಲ್ಲೂ ಸಿಟಿ ಬಸ್ಗಳಿಗೆ ಬಾಗಿಲುಗಳಿದ್ದು, ಪ್ರಯಾಣಿಕರಿಗೆ ಪ್ರಯಾಣ ಸುರಕ್ಷಿತವಾಗಿದೆ ಎಂದು ಡಿಸಿ ಹೇಳಿದರು.