ಮಂಗಳೂರು ; ನಂದಿ ರಥಯಾತ್ರೆ ಸ್ವಾಗತ ಸಮಿತಿ ಮಂಗಳೂರು, ಗೋಸೇವಾ ಗತಿವಿಧಿ ಕರ್ನಾಟಕ, ರಾಷ್ಟ್ರೀಯ ಗೋನೇಶ ಸಂಸ್ಥಾನ ಟ್ರಸ್ಟ್ (ರಿ), ಪುದು ಬಂಟ್ವಾಳ. ಇದರ ಆಶ್ರಯದಲ್ಲಿ 95 ದಿನಗಳ ಕಾಲ ಕರ್ನಾಟಕ ರಾಜ್ಯದಾದ್ಯಂತ ನು ರಥಯಾತ್ರೆ ಸಂಚರಿಸಿ,ಮಂಗಳೂರಿನಲ್ಲಿ ಏಪ್ರಿಲ್ 5 ಶನಿವಾರದಂದು, ರಾಜ್ಯಮಟ್ಟದ ಬೃಹತ್ ಸಮಾರೋಪ ಸಮಾರಂಭ ಸಂಜೆ 5.30 ಗಂಟೆಗೆ ಕದ್ರಿ ಮೈದಾನದಲ್ಲಿ ನಡೆಯಲಿರುವುದು ಎಂದು ಗೋಸಮಿತಿ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕರಾದ ಪ್ರವೀಣ್ ಸರಳಾಯ ರವರು ತಿಳಿಸಿದ್ದಾರೆ.
ಆ ಪ್ರಯುಕ್ತ ಮಧ್ಯಾಹ್ನ 3.30 ಗಂಟೆಗೆ ಡಾ| ಬಿ.ಆರ್. ಅಂಬೇಡ್ಕರ್ ಜ್ಯೋತಿ ವೃತ್ತದಿಂದ ಕದ್ರಿ ಮೈದಾನದವರೆಗೆ ನಂದಿ ರಥಯಾತ್ರೆಯ ಭವ್ಯ ಶೋಭಾಯಾತ್ರೆ ನಡೆಯಲಿರುವುದು.ಕರಾವಳಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಗಣೇಶ್ ರಾವ್ ರವರು ಶೋಭಾಯಾತ್ರೆ ಉದ್ಘಾಟನೆಗೊಳಿಸಲಿರುವರು. ವಿಶೇಷ ಆಕರ್ಷಣೆಯಾಗಿ ಜಿಲ್ಲೆಯ 108 ಕುಣಿತ ಭಜನಾ ತಂಡಗಳು ಭಾಗವಹಿಸವವು, ಮಾತೆಯರಿಂದ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣೆ, ಸ್ಯಾಕ್ಕೊ ಫೋನ್ ಚೆಂಡೆ ವಾದನ ಆಕರ್ಷಕ ಟ್ಯಾಬ್ಲೊಗಳು, ಜಾನಪದ ಗೊಂಬೆಗಳು ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಶೋಭಾಯಾತ್ರೆ ಸಾಗಿ ಬರಲಿರುವುದು. ಬಳಿಕ ಸಂಜೆ 5:30 ಕ್ಕೆ ನಡೆಯುವ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಸ್ವಾಮೀಜಿ ಹಾಗೂ ಅಧ್ಯಕ್ಷತೆಯನ್ನು -ಶ್ರೀ ಸುರೇಶ್ ಗೋಪಿ, ಪೆಟ್ರೋಲಿಯಂ ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಮಂತ್ರಿ ಯವರು ವಹಿಸಿದ್ದಾರೆ. ಪ್ರಾಸ್ತಾವಿಕ ಭಾಷಣವನ್ನು ಶ್ರೀ ಪ್ರವೀಣ ಸರಳಾಯ ಮಾಡಲಿದ್ದು ದಿಕ್ಕೂಚಿ ಭಾಷಣವನ್ನು ಶ್ರೀ ಅಜಿತ್ ಪ್ರಸಾದ್ ಮಹಾಪಾತ್ರರವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಈ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್,ಮಂಗಳೂರು ನಗರ ಉತ್ತರ ಶಾಸಕವ ಡಾ. ವೈ. ಭರತ್ ಶೆಟ್ಟಿ, ಶ್ರೀ ಸಾಯಿ ಸಂಸ್ಥೆ, ಮುದ್ದೇನಹಳ್ಳಿಯ ಶ್ರೀ ಗೋವಿಂದ ರೆಡ್ಡಿ ,ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ನ ಅಧ್ಯಕ್ಷ ಭಕ್ತಿಭೂಷಣ್ ದಾಸ್ ರವರು ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮಕ್ಕೆ ಮುಂಚೆ ಸಂಜೆ 4.00 ಗಂಟೆಗೆ, ಕದ್ರಿ ಮೈದಾನದಲ್ಲಿ
ಗೋಭಕ್ತಿ ಗಾನಸುಧಾ, ಶ್ರೀ ಶ್ರೀ ಕಾಳಿತನಯ ಉಮಾಮಹೇಶ್ವರ ಆಚಾರ್ಯರು, ಓಂಕಾರ ಜ್ಯೋತಿ ಆಶ್ರಮ ಚಿಕ್ಕಬಳ್ಳಾಪುರ ಇವರಿಂದ ನಡೆಯಲಿರುವುದು.ಈ ಸಂದರ್ಭ ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ ವರೆಗೆ ಕದ್ರಿ ಮೈದಾನದಲ್ಲಿ ದೇಶಿಯ ಗೋತಳಿಗಳ ಭರ್ಜರಿ ಪ್ರದರ್ಶನ- ಪುರಸ್ಕಾರ ಕಾರ್ಯಕ್ರಮ ಜರಗಲಿರುವುದು.
ಗೋವುಗಳಲ್ಲಿ ಅಪರೂಪವಾಗಿರುವ ಗಜಗಾತ್ರದ ವಿಶೇಷ ತಳಿಗಳನ್ನು ಇಂದಿನ ಪೀಳಿಗೆ ಕಣ್ಣುಂಬಿಕೊಳ್ಳಲು ವಿಶೇಷ ಅವಕಾಶ, ಉತ್ತಮ ತಳಿಯ ದೇಶಿಯ ಗೋ ಪಾಲನೆ ಮಾಡುವವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತೀರ್ಪುಗಾರರ ಆಯ್ಕೆಯ ಗೋವುಗಳಿಗೆ ವಿಶೇಷ ಬಹುಮಾನಗಳ ಪುರಸ್ಕಾರ ನೀಡಲಾಗುವುದು ಎಂದರು. ಈ ಕಾರ್ಯಕ್ರಮದಲ್ಲಿ ಸುಮಾರು 10,000 ಕ್ಕೂ ಅಧಿಕ ಗೋ ಪ್ರೇಮಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಚ್ .ಕೆ ಪುರುಷೋತ್ತಮ್,ಭಕ್ತಿಭೂಷನ್ ದಾಸ್,ಗಿರಿಧರ್ ಶೆಟ್ಟಿ, ಜಗದೀಶ್ ಶೆಣವ ಹಾಗೂ ಇನ್ನಿತರು ಉಪಸ್ಥಿತರಿದ್ದರು.


