ಮಂಗಳೂರು : ಎಪ್ರಿಲ್ 4 ರಿಂದ ಎಪ್ರಿಲ್ 13 ರ ವರೆಗೆ ಜಪ್ಪು ಬಪ್ಪಾಲ್ ನಲ್ಲಿರುವ ಶ್ರೀ ಜನಾರ್ದನ ಭಜನಾ ಮಂದಿರದ ಅಮೃತ ಮಹೋತ್ಸಹವನ್ನು ಆಚರಿಸಲಾಗುತ್ತದೆಂದು ಪ್ರತಿಕಗೋಷ್ಟಿಯಲ್ಲಿ ತಿಳಿಸಿದ್ದಾರೆ.



ಕಳೆದ 74 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಮಾಜಮುಖ ಸತ್ಕಾರ್ಯಗಳನ್ನು ನಡೆಸಿಕೊಂಡು ಬರುವ ಮೂಲಕ, ಮಂದಿರವು ಪರಿಸರದ ಪ್ರಮುಖ ಶ್ರದ್ಧಾ ಕೇಂದ್ರವಾಗಿರುವುದು. ಪರಿಸರದ ಭಕ್ತರ ಇಷ್ಟಾರ್ಥದಾಯಕ ಶ್ರೀ ಜನಾರ್ದನ ಸ್ವಾಮಿಯ ವಿಶೇಷ ಸಾನಿಧ್ಯವಿರುವ ಈ ಕ್ಷೇತ್ರದಲ್ಲಿ ಈವರೆಗೆ ಊರ ಪರವೂರ ಧಾನಿಗಳ, ಭಕ್ತರ ನೆರವಿನಿಂದ ಮಂದಿರದ ಜೀರ್ಣೋದ್ಧಾರ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಸಂಪನ್ನಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.
ಮಂದಿರದ ವತಿಯಿಂದ ಪ್ರತೀ ವರ್ಷವೂ ಪರಿಸರದ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ಮಾಡುತ್ತಿದ್ದೇವೆ. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸುತ್ತಿದ್ದೇವೆ. ಪರಿಸರದ ಆಶಕ್ತರಿಗೆ ಸಂದರ್ಭೋಚಿತವಾಗಿ ಆರ್ಥಿಕ ನೆರವನ್ನು ನೀಡುತ್ತಿದ್ದೇವೆ. ನಮ್ಮ ಎಲ್ಲಾ ಯೋಜನೆಗಳ ಕಾರ್ಯಕಲಾಪಗಳು ಪಾರದರ್ಶಕವಾಗಿ ಜರಗುವ ಉದ್ದೇಶದಿಂದ ಕರ್ನಾಟಕ ಸರಕಾರದ ಸಂಘ ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ಈ ಹಿಂದೆಯೇ ಮಂದಿರವನ್ನು ನೋಂದಾಯಿಸಿರುತ್ತೇವೆ ಎಂದು ಹೇಳಿದ್ದಾರೆ.
ಮಂದಿರ ಸ್ಥಾಪನೆಯಾಗಿ 75 ವರ್ಷಕ್ಕೆ ಪಾದಾರ್ಪಣೆಗೊಂಡ ಈ ಶುಭ ವರುಷದಲ್ಲಿ ಶ್ರೀ ಜನಾರ್ದನ ಸ್ವಾಮಿಯ ಪ್ರೇರಣೆ ಮತ್ತು ಸರ್ವ ಸದಸ್ಯರ ಅಪೇಕ್ಷೆಯಂತೆ ಲೋಕ ಕಲ್ಯಾಣಾರ್ಥವಾಗಿ ಮಂದಿರದ ಅಮೃತ ಮಹೋತ್ಸವವನ್ನು ಊರ ಪರವೂರ ಭಕ್ತಜನರ ಸಹಕಾರದೊಂದಿಗೆ ತಾ: 5.4.2025 ರಿಂದ 12.4.2025ರ ವರೆಗೆ ಅಖಂಡ ಭಜನಾ ಸಪ್ತಾಹವನ್ನು ಆಚರಿಸುವುದಾಗಿ ನಿರ್ಧರಿಸಿದ್ದು ಅಮೃತ ಮಹೋತ್ಸವದ ಸವಿನೆನಪಿಗಾಗಿ ಮಂದಿರಕ್ಕೆ ಹೊಂದಿಕೊಂಡಿರುವ 7 ಸೆಂಟ್ಸ್ ಜಾಗವನ್ನು ಖರೀದಿಸುವುದೆಂದು ನಿರ್ಧರಿಸಿದ್ದೇವೆ ಎಂದಿದ್ದಾರೆ.ಮಂದಿರ ಖರೀದಿಸಲಿರುವ ಜಾಗ, ಆವರಣಗೋಡೆ, ಮೇಲ್ಬಾವಣಿ ಮತ್ತು ಅಮೃತ ಮಹೋತ್ಸವದ ಕಾರ್ಯಕ್ರಮಗಳಿಗೆ ಸುಮಾರು 1.50 ಕೋಟಿ (ಒಂದು ಕೋಟಿ ಐವತ್ತು ಲಕ್ಷ) ವೆಚ್ಚವನ್ನು ಅಂದಾಜಿಸಲಾಗಿದೆ ಮಂದಿರಕ್ಕೆ ಭಕ್ತರ ದೇಣಿಗೆಯನ್ನು ಹೊರತುಪಡಿಸಿ ಬೇರೆ ಯಾವುದೇ ಆದಾಯ ಮೂಲವಿರುವುದಿಲ್ಲ. ಆದುದರಿಂದ ಸಹೃದಯ ಭಕ್ತ ಸಮುದಾಯ ಮತ್ತು ದಾನಿಗಳು ತನು-ಮನ-ಧನದಿಂದ ಸಹಕರಿಸಿ ಮೇಲೆ ತಿಳಿಸಿರುವ ಕಾರ್ಯಕ್ರಮಗಳು ಯಶಸ್ವಿಗೊಳಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪುಂಡಲೀಕ ಸುವರ್ಣ, ಕಾರ್ಪೊರೆಟರ್ ಭರತ್ ಕುಮಾರ್, ಸುನೀಲ್ ಕುಮಾರ್,ಸತೀಶ್ ಆಚಾರ್ಯ,ಲಕ್ಷ್ಮಣ ಆಚಾರ್ಯ,ಉಮೇಶ್ .ಕೆ,ರಘುವೀರ ಆಚಾರ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.