ಮಂಗಳೂರು : ಎಡಕುಮಾರಿ-ಶಿರಿಬಾಗಿಲು ನಡುವೆ( ಕಿ.ಮಿ 74/900) ಗುಡ್ಡ ಕುಸಿದು ರೈಲ್ವೆ ಹಳಿ ಮೇಲೆ ಬಂಡೆಗಳು ಬಿದ್ದ ಪರಿಣಾಮ ಮೂರು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿದೆ ಎಂದು ರೈಲ್ವೆ ಇಲಾಖೆ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಈ ಹಿನ್ನೆಲೆ ವಿಜಯಪುರ,ಹುಬ್ಬಳ್ಳಿ,ಅರಸೀಕೆರೆ,ಬೆಂಗಳೂರು ಸೇರಿ ವಿವಿಧ ಭಾಗಗಳಿಂದ ಸುಬ್ರಹ್ಮಣ್ಯ,ಧರ್ಮಸ್ಥಳ ಕಡೆಗೆ ಚಲಿಸುವ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.
ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಇದೀಗ ತಡವಾಗಿ ಬೆಳಗ್ಗೆ 9:18 ಎಡಕುಮೇರಿಯಿಂದ ಹೊರಟಿದ್ದು,ರೈಲು ಸಂಖ್ಯೆ 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಬೆಳಗ್ಗೆ 9:05ಕ್ಕೆ ಸಕಲೇಶಪುರದಿಂದ ಹೊರಟಿದೆ.ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಗ್ಗೆ 6:26ಕ್ಕೆ ಆಗಮಿಸಿದ್ದು ತಡವಾಗಿ ಹೊರಡಲಿದೆ.
ರೈಲಿನಲ್ಲಿರುವ ಪ್ರಯಾಣಿಕರಿಗೆ ಕುಡಿಯುವ ನೀರು, ಬಿಸ್ಕೆಟ್, ಉಪಹಾರ ಮತ್ತು ಚಹಾ ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನಿಮ್ಮ ರೈಲು ಎಲ್ಲಿದೆ ಎಂದು ತಿಳಿಯಲು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ/ಅಪ್ಲಿಕೇಶನ್ ಎನ್.ಟಿ.ಇ.ಎಸ್ ಅಥವ ವೇರ್ ಇಸ್ ಮೈ ಟ್ರೈನ್ ಅಪ್ಲಿಕೇಶನ್ ಬಳಸಿಕೊಳ್ಳಲು ಸೂಚಿಸಿದೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದಯವಿಟ್ಟು @RailwaySevaಗೆ ಟ್ಯಾಗ್ ಮಾಡಿ ಅಥವ 139ಗೆ ಕರೆ ಮಾಡಿ.ಹೆಚ್ಚಿನ ಮಾಹಿತಿಗಳಿಗೆ, ವಾಟ್ಸಾಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಬಳಕೆದಾರರು ಸಮಿತಿಯ ವಾಟ್ಸಾಪ್ ಚಾನಲ್ ಅನ್ನು ಅನುಸರಿಸಿ: 👉 https://whatsapp.com/channel/0029VafanHE1dAw1Qs4OLx1B
ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಅಗ್ರಹಿಸಿದೆ.