Friday, November 22, 2024
Flats for sale
Homeಜಿಲ್ಲೆಮಂಗಳೂರು : ಉಳ್ಳಾಲದ ಬಳಿ ರೈಲ್ವೆ ಹಳಿ ಮೇಲೆ ಜಲ್ಲಿ ಕಲ್ಲು ಸುರಿದು ಹಳಿ ತಪ್ಪಿಸಲು...

ಮಂಗಳೂರು : ಉಳ್ಳಾಲದ ಬಳಿ ರೈಲ್ವೆ ಹಳಿ ಮೇಲೆ ಜಲ್ಲಿ ಕಲ್ಲು ಸುರಿದು ಹಳಿ ತಪ್ಪಿಸಲು ಯತ್ನ,ತಪ್ಪಿದ ಬಾರಿ ಅನಾಹುತ ..!

ಮಂಗಳೂರು : ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ರೈಲು ಹಳಿ ತಪ್ಪಿಸುವ ಯತ್ನಗಳು ಹೆಚ್ಚಾಗುತ್ತಿದ್ದು . ಅದೃಷ್ಟವಶಾತ್ ಲೊಕೊಪೈಲಟ್​ಗಳ ಸಮಯ ಪ್ರಜ್ಞೆಯಿಂದ ಹಲವು ಅನಾಹುತಗಳು ತಪ್ಪಿವೆ. ಇದೀಗ ಮಂಗಳೂರಿನಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿದೆ, ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲದ ಬಳಿ ರೈಲ್ವೆ ಹಳಿ ಮೇಲೆ ಆಗಂತುಕರು ಜಲ್ಲಿ ಕಲ್ಲುಗಳನ್ನು ಸುರಿದಿರುವ ಘಟನೆ ತಡರಾತ್ರಿ ಸುಮಾರಿಗೆ ತೊಕ್ಕೊಟ್ಟುವಿನ ರೈಲ್ವೇ ಹಳಿಯಲ್ಲಿ ಘಟನೆ ನಡೆದಿದೆ.

ಮಂಗಳೂರಿನಿಂದ ರೈಲೊಂದು ಕೇರಳ ಕಡೆಗೆ ತೆರಳಿದ ವೇಳೆ ದೊಡ್ಡ ಶಬ್ದ ಕೇಳಿಸಿದ್ದು ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಕೇಳಿದೆ ಕೆಲವು ಮಂದಿ ಭೂಕಂಪವಾಗಿರಬಹುದು ಎಂದುಕೊಂಡಿದ್ದು ಸ್ಥಳೀಯರು ಬಂದು ಪರಿಶೀಲನೆ ನಡೆಸಿದ್ದಾರೆ, ಆಗ ಹಳಿ ಮೇಲೆ ಜಲ್ಲಿಕಲ್ಲುಗಳನ್ನು ಸುರಿದಿರುವುದು ಕಂಡುಬಂದಿದೆ. ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರ ಮಾಹಿತಿ ನೀಡಲಾಗಿದೆ.

ಶತ್ರುರಾಷ್ಟ್ರ ಪಾಕ್‌ ನ ಭಯೋತ್ಪಾದಕ ಫ‌ರ್ಹಾತುಲ್ಲಾ ಘೋರಿ ಸಂಘಟನೆ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದು ದೇಶದ ಹಲವೆಡೆ ಎನ್.ಐ.ಎ ಮತ್ತು ಭಯೋತ್ಪಾದಕ ನಿಗ್ರಹ ದಳದ ಮೂಲಕ ತನಿಖೆ ನಡೆಯುತ್ತಿದೆ.ಹಾಗೂ ಹಲವೆಡೆ ಕಟ್ಟೆಚ್ಚರ ವಹಿಸಲಾಗಿದೆ.

ತಡರಾತ್ರಿ 8.04 ರ ಸುಮಾರಿಗೆ ಕೊರಗಜ್ಜನ ಅಗೆಲು ಮುಗಿಸಿ ವಾಪಸ್ಸಾಗುತ್ತಿದ್ದ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿ ಮಹಿಳೆಯರು ಹಳಿಯಲ್ಲಿ ಇಬ್ಬರು ಆಗಂತುಕರನ್ನು ಕಂಡಿದ್ದರು. ಅಲ್ಲಿಂದ ಮನೆಗೆ ತಲುಪುವಷ್ಟರಲ್ಲಿ ರೈಲೊಂದು ಕೇರಳ ಕಡೆಗೆ ತೆರಳಿತ್ತು. ಈ ವೇಳೆ ದೊಡ್ಡ ಸದ್ದು ಆವರಿಸಿತ್ತು. ಅದನ್ನು ಸ್ಥಳೀಯರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಆವರಿಸಿತ್ತು. ಪರಿಣಾಮ ಸ್ಥಳೀಯ ಕೆಲವು ಮನೆಗಳಲ್ಲಿಯೂ ಕಂಪನವುAಟಾಗಿತ್ತು. ತಕ್ಷಣವೇ ರೈಲು ಅಪಘಾತವೆಂದು ಭಾವಿಸಿ ಹಳಿಯತ್ತ ದೌಡಾಯಿಸಿದಾಗ ಹಳಿ ಮೇಲಿರಿಸಲಾದ ಜಲ್ಲಿಕಲ್ಲುಗಳು ತುಂಡಾಗಿರುವುದು ಅಲ್ಪಸ್ವಲ್ಪ ಕಂಡುಬAದಿದೆ. ಕಳೆದ 40 ವರ್ಷಗಳಿಂದ ತೊಕ್ಕೊಟ್ಟು ಪರಿಸರದಲ್ಲಿ ನೆಲೆಸಿದ್ದೇವೆ. ಆದರೆ ರೈಲು ಚಲಿಸುವಾಗ ಕಂಪನದ ಅನುಭವ ಇದೇ ಮೊದಲ ಬಾರಿಗೆ ಆಗಿದೆ ಅನ್ನುವ ಅಭಿಪ್ರಾಯವನ್ನು ಸ್ಥಳೀಯ ಮಹಿಳೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಓವರ್ ಬ್ರಿಡ್ಜ್ ಕೆಳಗಡೆ ನಿತ್ಯ ಅಪರಿಚಿತರು ಬಂದು ಕುಳಿತು ಪಾನಮತ್ತರಾಗಿ ತೆರಳುತ್ತಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳೇ ಇವೆ. ಇದೀಗ ಸಂಭಾವ್ಯ ಅನಾಹುತ ತಪ್ಪಿದೆ. ಮುಂದೊಂದು ದಿನ ಅಪಾಯ ನಡೆಯುವ ಮುನ್ನ ಎಚ್ಚೆತ್ತು, ಸಂಬAಧಪಟ್ಟ ಇಲಾಖೆ ಸಿಸಿಟಿವಿ ಅಳವಡಿಸಬೇಕು ಅನ್ನುವ ಆಗ್ರಹ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular