ಮಂಗಳೂರು ; ಉಳ್ಳಾಲದ ಖಾಝಿ ಸಯ್ಯದ ಫಝಲ್ ಕೋಯಮ್ಮ ತಂಙಳ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದಿದ್ದಾರೆ. ಕಣ್ಣೂರಿನ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ಖಾಝಿ ಅವರು ಸ್ವರ್ಗಸ್ಥರಾಗಿದ್ದಾರೆ ಎಂದು ಕುಟುಂಬ ವಲಯ ಮಾಹಿತಿ ನೀಡಿದ್ದಾರೆ
ಮೂಲತಃ ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿದ್ದ ಖಾಝಿಯವರು ಕೂರ ತಂಙಳ್ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಬಹಳಷ್ಟು ವರ್ಷಗಳ ಹಿಂದೆ ಕಾಣಿಯೂರು ಸಮೀಪದ ಕೂರ ಎಂಬಲ್ಲಿ ಜನರ ಕಷ್ಟಗಳಿಗೆ ಸ್ಪಂಧಿಸುವ ಮೂಲಕ ಕೂರ ತಂಙಳ್ ಎಂದು ಹೆಸರು ಪಡೆದುಕೊಂಡಿದ್ದರು. ಬಳಿಕ ಉಳ್ಳಾಲ ಖಾಝಿಯಾಗಿ ನೇಮಕವಾದ ಬಳಿಕ ಉಳ್ಳಾಲದಲ್ಲಿ ನೆಲೆಸಲು ಆರಂಭಿಸಿದ ಅವರು ಕೆಲ ಸಮಯದ ಹಿಂದೆ ಅಸ್ವಸ್ಥರಾಗಿದ್ದರು.
ಸ್ವರ್ಗಸ್ಥರಾದ ಖಾಝಿ ಅವರು ಪತ್ನಿ ಹಾಗೂ ಮಕ್ಕಳು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಕೂರ ಮಸೀದಿಯ ವಠಾರದಲ್ಲಿ ಧಫನ ಕಾರ್ಯ ನಡೆಯಲಿದ್ದು, ಸಂಜೆ 5 ಗಂಟೆಗೆ ಮಸೀದಿಯಲ್ಲಿ ಸ್ವರ್ಗಸ್ಥರ ಸದ್ಘತಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಈ ಪ್ರಾರ್ಥನೆಯಲ್ಲಿ ಸುಲ್ತಾನುಲ್ ಉಲೇಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಭಾಗವಿಸುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.


