ಮಂಗಳೂರು : ಕೆಲ ಸಮಯದಿಂದ ಸ್ತಬ್ದವಾಗಿದ್ದ ಮಂಗಳೂರು ಮತ್ತೊಮ್ಮೆ ಸುದ್ದಿಯಾಗಿದೆ. ಉಳ್ಳಾಲದ ಓವರ್ ಬ್ರಿಜ್ ಬಳಿ ಬೆಳ್ಳಂಬೆಳಿಗ್ಗೆ ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದಾರೆ. ಕೊಲೆಯಾದ ರೌಡಿಶೀಟರ್ ನನ್ನು ಮುಳ್ಳುಗುಡ್ಡೆ ಹೌಸ್ ತಲಪಾಡಿ ನಿವಾಸಿ ಆರಿಫ್ ಯಾನೆ ಟಾಬ್ಲೆಟ್ ಆರಿಫ್ (46) ಎಂದು ತಿಳಿದುಬಂದಿದೆ.
ಈತ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆರಿಫ್ ಆಗಿದ್ದು ತೊಕ್ಕೊಟ್ಟು ಫೈಓವರ್ ಬ್ರಿಜ್ ಮೇಲೆ ಇಂದು ಮುಂಜಾನೆ ಸುಮಾರು ೪ ಗಂಟೆಯ ವೇಳೆಗೆ ಈತನ ಕೊಲೆ ನಡೆದಿದೆ. ಬೈಕ್ ನಲ್ಲಿ ತೆರಳುತಿದ್ದ ವೇಳೆ ದುಷ್ಕರ್ಮಿಗಳ ತಂಡ ಆರಿಫ್ ಗೆ ಹಿಂಬದಿಂದ ಕಾರ್ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಆರಿಫ್ ಮೇಲೆ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದಾರೆ. ಈತ ಟೊಪ್ಪಿ ನೌಫಾಲ್ ಕೊಲೆ ಆರೋಪಿಯ ಪ್ರಮುಖ ಆರೋಪಿಯಾಗಿದ್ದು ಈತನ ಮೇಲೆ ಉಳ್ಳಾಲ ಠಾಣೆಯಲ್ಲಿ 2 (307) ಪ್ರಕರಣ ಹಾಗೂ ಪಾಂಡೇಶ್ವರ ಠಾಣೆಯಲ್ಲಿ 1 (302) ಪ್ರಕರಣ ದಾಖಲಾಗಿತ್ತು.ಈತನಿಗೆ ಪೊಲೀಸರು ಅಲರ್ಟ್ ಆಗಿರಲು ಮುನ್ನೆಚ್ಚರಿಕೆ ನೀಡಿದ್ದಾರೆಂದು ತಿಳಿದಿದೆ. ಕೃತ್ಯ ಎಸಗಿದ ಬಳಿಕ ಕಾರ್ ನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದು ಘಟನೆಗೆ ಗ್ಯಾಂಗ್ ವಾರ್ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


