ಮಂಗಳೂರು ; ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ಮೇಲೆ ಶುಕ್ರವಾರ ಸಂಜೆ ಪೊಲೀಸರು ದಾಳಿ ನಡೆಸಿ 12 ಜನರರನ್ನು ಬಂಧಿಸಿದ್ದಾರೆ.
ಸಂಜೆ 4 ಗಂಟೆ ಹೊತ್ತಿನಲ್ಲಿ 12 ಜನರ ಮಂಗಳೂರಿನ ಬಂದರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾರ್ಸ್ಟ್ರೀಟ್ ನಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಪೊಲೀಸರು ಖಚಿತ ಮಾಹಿತಿ ಆಧರಿಸಿ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಬಂಧಿತರನ್ನು ವಿಠೋಭ ದೇವಸ್ಥಾನದ ಬಳಿಯ ನಿವಾಸಿ ನಾಗರಾಜ್ ಬಂಡಾರಿ ಹಾಗೂ ಸಹಚರರೆಂದು ಮಾಹಿತಿ ದೊರೆತಿದೆ. ಬಂಧಿತರಿಂದ ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.