Thursday, March 12, 2026
Flats for sale
Homeಜಿಲ್ಲೆಮಂಗಳೂರು: ಇಬ್ಬರು ವಯೋವೃದ್ಧರು ಆತ್ಮಹತ್ಯೆಗೆ ಶರಣು.

ಮಂಗಳೂರು: ಇಬ್ಬರು ವಯೋವೃದ್ಧರು ಆತ್ಮಹತ್ಯೆಗೆ ಶರಣು.

ಮಂಗಳೂರು: ಇಬ್ಬರು ವೃದ್ಧ ಮಹಿಳೆಯರು ಅಕ್ಟೋಬರ್ 3, ಮಂಗಳವಾರದಂದು ಕದ್ರಿ ಕಂಬಳದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಎಂದಿನಂತೆ ಕೆಲಸಕ್ಕೆ ಹೋಗಿದ್ದ ಲತಾ ಅವರ ಪತಿ ಜಗನ್ನಾಥ್ ಸಂಜೆ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಿಟಕಿಯಿಂದ ಇಣುಕಿ ನೋಡಿದಾಗ ಪತ್ನಿ ಹಾಗೂ ಅತ್ತಿಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.

ಕೌಟುಂಬಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular