ಮಂಗಳೂರು : ಬೀದಿ ನಾಯಿ ಸಾಕು ನಾಯಿ ಯಿಂದ ಹಲವು ಜನರು ಸಮಸ್ಯೆ ಎದುರಿಸುವ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯ (ಎಂಸಿಸಿ) ಎಲ್ಲಾ 60 ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಗಣನೀಯವಾಗಿ ಹೆಚ್ಚಿದ ಕಾರಣ ಹಲವಾರು ಈ ನಾಯಿಗಳಿಂದ ಕಚ್ಚಿಸಿಕೊಂಡಿದ್ದ,ಘಟನೆ ಹಾಗೂ ದ್ವಿಚಕ್ರ ಸವಾರರನ್ನು ಓಡಿಸಿಕೊಂಡು ಬರುವಂತಹ ಸಂದರ್ಭದಲ್ಲಿ ಎಷ್ಟೋ ಮಂದಿ ಸ್ಕಿಡ್ ಆಗಿ ಪ್ರಾಣಕ್ಕೆ ಹಾನಿಯಾದ ಘಟನೆ ನಡೆದಿದ್ದು ಹಾಗೂ ಕಚ್ಚಿಸಿ ಕೊಂಡು ಇದರಿಂದ ರೇಬೀಸ್ ಕೂಡ ಉಂಟಾದ ಸಂದರ್ಭ ನಡೆದಿದೆ.
ಈ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ನಗರ ನಿಗಮದಿಂದ ಪರವಾನಗಿ ಪಡೆಯಲು ಸಾಕು ನಾಯಿ ಮಾಲೀಕರಿಗೆ MCC ತಿಳಿಸಿದೆ. ಪ್ರಕಟಣೆಯಲ್ಲಿ ಎಂಸಿಸಿ ಆಯುಕ್ತರು, “ನಾಗರಿಕರು ತಮ್ಮ ಸಾಕು ನಾಯಿಗಳಿಗೆ ಎಂಸಿಸಿಯಿಂದ ಪರವಾನಗಿಗಾಗಿ ಅರ್ಜಿಯನ್ನು ತೆಗೆದುಕೊಳ್ಳಬೇಕು. ಅವರು ನಾಯಿಯ ಲಸಿಕೆ ದಾಖಲೆ, ಮಾಲೀಕರ ಆಧಾರ್ ಕಾರ್ಡ್, ನೆರೆಹೊರೆಯವರಿಂದ NOC ಮತ್ತು ನಾಯಿಯ ಎರಡು ಭಾವಚಿತ್ರಗಳನ್ನು ಒದಗಿಸಬೇಕು.
ಕೆಲವು ಸಂಘ ಸಂಸ್ಥೆಗಳು ಸಾಕು ನಾಯಿಯ ಹೆಸರಲ್ಲೂ ಹಣ ಮಾಡುವ ಕೆಲಸ ಮಾಡುತ್ತಿದ್ದು ಇದರಿಂದ ರಸ್ತೆಬದಿಯಲ್ಲಿ ಪ್ರಾಣಿಗಳಿಗೆ ಊಟ ಹಾಕುತ್ತಿದ್ದು ಇದರಿಂದ ಬೀದಿ ನಾಯಿಗಳಿಗೂ ಇವರು ತಂದು ಹಾಕುವ ಆಹಾರದಿಂದ ಶಕ್ತಿ ಹೆಚ್ಚಾಗಿದೆ . ಸಾಕು ನಾಯಿಗಳು ಬೀದಿಗಳಲ್ಲಿ ಸಂಚರಿಸಲು ಅವಕಾಶ ನೀಡುವುದು ಕಂಡುಬಂದಲ್ಲಿ ಮತ್ತು ಸಾರ್ವಜನಿಕರಿಗೆ ಅನಾನುಕೂಲತೆ ಉಂಟು ಮಾಡಿದರೆ ಸಾಕು ನಾಯಿಗಳ ಮಾಲೀಕರ ಮೇಲೆ ಎಂಸಿಸಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.