Tuesday, October 21, 2025
Flats for sale
Homeಜಿಲ್ಲೆಮಂಗಳೂರು : ಆ.7 ರಿಂದ 10 ರ ವರೆಗೆ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ' ಮಿಸ್ ಡಿವೈನ್...

ಮಂಗಳೂರು : ಆ.7 ರಿಂದ 10 ರ ವರೆಗೆ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ‘ ಮಿಸ್ ಡಿವೈನ್ ದಿವಾ’ ಪೇಜೆಂಟ್ ಸೌಂದರ್ಯ ಸ್ಪರ್ಧೆ…!

ಮಂಗಳೂರು ; ‘ಮಿಸ್ ಡಿವೈನ್ ದಿವಾ’ ರಾಷ್ಟ್ರಮಟ್ಟದ ಫ್ಯಾಷನ್ ಪೇಜೆಂಟ್ ಸೌಂದರ್ಯ ಸ್ಪರ್ಧೆ ಮತ್ತು ಗ್ರ್ಯಾಂಡ್ ಫಿನಾಲೆ ಮಂಗಳೂರಿನ ಅವತಾರ್ ಹೋಟೆಲ್‌ನಲ್ಲಿ ಆ.7ರಿಂದ 10 ರವರೆಗೆ ಜರಗಲಿದೆ. ಅಸ್ತ್ರ ಗ್ರೂಫ್ ಅರ್ಪಣೆಯಲ್ಲಿ ಅಜಯ್ ಕುಮಾರ್ ಹಾಗೂ ಸಾಹಿಲ್ ಈವೆಂಟ್ಸ್ ಆಶ್ರಯದಲ್ಲಿ ಸ್ಪರ್ಧೆ ಆಯೋಜನೆಯಾಗಿದೆ.

ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ಸಾಹಿಲ್ ಅವರು, ‘ಮಿಸ್ ಡಿವೈನ್ ಕರಾವಳಿಗೆ ಹೊಸ ಅವಕಾಶದ ಬಾಗಿಲು. ಜಗತ್ತಿಗೆ ಮಂಗಳೂರಿನ ಸೌಂದರ್ಯವನ್ನು ಪಸರಿಸಲು ಸೂಕ್ತ ವೇದಿಕೆ. ಇದರಲ್ಲಿ ಕಾಶ್ಮೀರದಿಂದ ತೊಡಗಿ ದೇಶದ ವಿವಿಧ ಭಾಗಗಳ ಸ್ಪಽಗಳು ಪಾಲ್ಗೊಳ್ಳಲಿದ್ದಾರೆ. ಕರಾವಳಿಯ ಪ್ರವಾಸೋದ್ಯಮಕ್ಕೆ ಇದೊಂದು ಹೊಸ ಸಾಧ್ಯತೆಯ ದಾರಿ’ ಎಂದರು.

ಅಸ್ತ್ರ ಗ್ರೂಪ್ ಸಿಇಒ ಲಂಚುಲಾಲ್ ಕೆ.ಎಸ್. ಮಾತನಾಡಿ, ‘ದೇಶದ ವಿವಿಧ ಭಾಗಗಳಿಂದ ಆಯ್ದ ೫೦ ಮಂದಿ ಸ್ಪಽಗಳು ಪಾಲ್ಗೊಳ್ಳಲಿದ್ದು, ಮಂಗಳೂರಿನ ಹೆಸರು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಮತ್ತು ಇಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿವೈನ್ ದಿವಾ ಸ್ಪರ್ಧೆಗೆ ಅಸ್ತ್ರ ಸಂಸ್ಥೆಯು ಪ್ರಾಯೋಜಕತ್ವ ವಹಿಸಿದೆ. ಇದರಿಂದ ಹೊಸಬರಿಗೆ ಅವಕಾಶ ಸಿಗಲಿದೆ’ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಅಜಯ್ ಕುಮಾರ್, ಮೋಹನ್ ದಾಸ್ ರೈ, ಮಿಸ್ ಸೆಲೆಸ್ಟಿಯಲ್ ಆಫ್ ವರ್ಲ್ಢ್ ಸೃಷ್ಟಿವೇಣು, ಪ್ರಮುಖರಾದ ಪಮ್ಮಿ ಕೊಡಿಯಾಲ್‌ಬಲ್, ಮೋಹನ್‌ದಾಸ್ ರೈ, ಸಂದೀಪ್ ಶೆಟ್ಟಿ, ಯಶಿಕ, ಫವಾಜ್, ಅಭಿಷೇಕ್, ಇಮ್ರಾನ್, ಅಜಿತ್ ಸಿಂಗ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular