Thursday, March 12, 2026
Flats for sale
Homeಜಿಲ್ಲೆಮಂಗಳೂರು : ಆಸ್ತಿಗಾಗಿ ಮನೆಯ ಮುಂದೆ ನಿವೃತ್ತ ಶಿಕ್ಷಕನ ಹತ್ಯೆ ಪ್ರಕರಣ : ಅಳಿಯ-ಮೊಮ್ಮಗನ ಬಂಧನ.

ಮಂಗಳೂರು : ಆಸ್ತಿಗಾಗಿ ಮನೆಯ ಮುಂದೆ ನಿವೃತ್ತ ಶಿಕ್ಷಕನ ಹತ್ಯೆ ಪ್ರಕರಣ : ಅಳಿಯ-ಮೊಮ್ಮಗನ ಬಂಧನ.

ಮಂಗಳೂರು : ಮಗಳಿಗೆ ಆಸ್ತಿಯನ್ನು ಪಾಲು ಮಾಡಿ ಕೊಡದೇ ಇರುವ ಕಾರಣದಿಂದ ನಿವೃತ್ತ ಶಿಕ್ಷಕನನ್ನೇ ಹತ್ಯೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬಾಲಕೃಷ್ಣ ಭಟ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳ ಪೊಲೀಸರು ಮೊಬೈಲ್, ಸಿಸಿ ಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಯಾದ ಬಾಲಕೃಷ್ಣ ಭಟ್(83) ಅವರ ಮಗಳ ಗಂಡ(ಆಳಿಯ) ರಾಘವೇಂದ್ರ ಕೆಧಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20) ಎಂಬಾತನನ್ನು ಆ.24 ರಂದು ಕಾಸರಗೋಡು ಮನೆಯಲ್ಲಿ ಬಂಧಿಸಿದ್ದಾರೆ.

ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ದಿ.ಯು.ಲೀಲಾ(75) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್​ನಲ್ಲಿ ಇಟ್ಟಿದ್ದರು. ಇದೇ ಕಾರಣದಿಂದ ಬೇಸರಗೊಂಡಿದ್ದ ಬಾಲಕೃಷ್ಣ ಭಟ್ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆಧಿಲಾಯ(53) ಮತ್ತು ಮಗ ಮುರಳಿ ಕೃಷ್ಣ (20) ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾರೆ. ಅಪ್ಪ-ಮಗ ಸೇರಿಕೊಂಡು ಕಾಸರಗೋಡು ಮನೆಯಿಂದ ಮಾರಕಾಸ್ತ್ರ ರೆಡಿ ಮಾಡಿಕೊಂಡು ನೇರ ವಿಜಯಲಕ್ಷ್ಮಿಯ ಸ್ಕೂಟರ್​ನಲ್ಲಿ ರಾಘವೇಂದ್ರ ಕೆಧಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರುಳಿಕೃಷ್ಣ ಬಂದು ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದು ಸ್ಕೂಟರಿನಲ್ಲಿಯೇ ಅಪ್ಪ-ಮಗ ಬೆಳಾಲಿಗೆ ಬಂದು ಬಾಲಕೃಷ್ಣ ಭಟ್ ಮನೆ ಸೇರಿದ್ದಾರೆ.

ಆರೋಪಿಗಳು ಬಾಲಕೃಷ್ಣ ಬಡೆಕಿಲ್ಲಾಯ ಅವರ ಕಿರಿಯ ಮಗ ಸುರೇಶ್ ಭಟ್ ನನ್ನು ಹತ್ಯೆ ಮಾಡಲು ಕೂಡ ಯೋಜನೆ ರೂಪಿಸಿದ್ದು, ಬಾಲಕೃಷ್ಣನನ್ನು ಕೊಲೆ ಮಾಡಿದ ಬಳಿಕ ಸುರೇಶ್ ಭಟ್ ಬರುತ್ತಾರೆ ಎಂದು ಕೆಲ ಕಾಲ ಮನೆಯಲ್ಲೇ ಕಾದು ಕುಳಿತಿದ್ದರು. ಆದರೆ ಆತ ಬಾರದೆ ಇದ್ದಾಗ ಹಂತಕರು ತಲಾ 50 ಸಾವಿರ ರೂ.ಮೌಲ್ಯದ ಎರಡು ಬಾಂಡ್ ಪೇಪರ್‌ಗಳು ಹಾಗೂ ಕಬೋರ್ಡ್‌ನಲ್ಲಿದ್ದ ಕೆಲವು ದಾಖಲೆಗಳನ್ನು ತೆಗೆದುಕೊಂಡು ಸ್ಕೂಟರ್‌ನಲ್ಲಿ ಬಂದ ದಾರಿಯಲ್ಲೇ ಮನೆಗೆ ಪರಾರಿಯಾಗಿದ್ದಾರೆ ಎಂದು ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ.

ತಂದೆಯ ಕೊಲೆಯಲ್ಲಿ ಪತಿ ಮತ್ತು ಮಗನ ಕೈವಾಡ ಇರುವುದು ವಿಜಯಲಕ್ಷ್ಮಿಗೆ ತಿಳಿದಿರಲಿಲ್ಲ. ಧರ್ಮಸ್ಥಳ ಪೊಲೀಸರು ಆಕೆಯ ಮನೆಗೆ ಆಗಮಿಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಾಗ ಅವರ ಕೃತ್ಯಗಳ ಬಗ್ಗೆ ಆಕೆಗೆ ತಿಳಿಯಿತು.

ಹತ್ಯೆ ನಡೆದ ಕೂಡಲೇ ಮಂಗಳೂರಿನಿಂದ ಶ್ವಾನದಳದ ತಂಡವು ಸ್ಥಳಕ್ಕೆ ಆಗಮಿಸಿದೆ. ನಾಯಿಯು ತಮ್ಮ ಊಟದ ನಂತರ ಬಳಸಿದ ಬಾಳೆ ಎಲೆಯನ್ನು ಬಿಸಾಡಿದ ಬಾವಿಯ ಹಾದಿಯನ್ನು ಪತ್ತೆಹಚ್ಚಿತು ಮತ್ತು ನಂತರ ರಸ್ತೆಯ ಕಡೆಗೆ ಚಲಿಸಿತು. ಇದರಿಂದ ಪೊಲೀಸರಿಗೆ ಮೊದಲ ಸುಳಿವು ಸಿಕ್ಕಿದೆ. ಅವರು ಎಲ್ಲಾ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಮೃತರ ಅಳಿಯ ಮತ್ತು ಮೊಮ್ಮಗನನ್ನು ಬಂಧಿಸಿದ್ದಾರೆ.

ವಿಜಯಲಕ್ಷ್ಮಿ ಹಾಗೂ ಅವರ ಪತಿ ರಾಘವೇಂದ್ರ ಅವರು ಆ.21ರಂದು ಮಧ್ಯಾಹ್ನ ಬಾಲಕೃಷ್ಣ ಬಡೆಕಿಲ್ಲಾಯ ಅವರ ಪಾರ್ಥಿವ ಶರೀರವನ್ನು ವೀಕ್ಷಿಸಲು ಬೆಳಾಲುವಿಗೆ ಬಂದಿದ್ದರು.ಆದರೆ ಅವರ ಪುತ್ರ ಮೃತರ ಮೊಮ್ಮಗ ಮುರಳಿಕೃಷ್ಣ ತಾತನ ಮನೆಗೆ ಬಂದಿರಲಿಲ್ಲ.

ಜಿಲ್ಲಾ ಎಸ್ಪಿ ಯತೀಶ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ. ತಂಡದಲ್ಲಿ ಡಿವೈಎಸ್ಪಿ ವಿಜಯಪ್ರಸಾದ್, ಬೆಳ್ತಂಗಡಿ ಸಿಐ ನಾಗೇಶ್ ಕದ್ರಿ, ಧರ್ಮಸ್ಥಳ ಎಸ್ಐಗಳಾದ ಕಿಶೋರ್ ಮತ್ತು ಸಮರ್ಥ ಗಾಣಿಗೇರ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular