ಮಂಗಳೂರು : ಆಲ್ ಇಂಡಿಯಾ ಮೊಬಯ್ಲ್ ರಿಟೇಲ ರ್ಸ್ ಅಸೋಸಿಯೇಷನ್ ವತಿಯಿಂದ ದಕ್ಷಿಣ ಕನ್ನಡ ಉಡುಪಿ ರಿಟೇಲ ರ್ಸ್ ಅಸೋಸಿಯೇಷನ್ ವತಿಯಿಂದ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ಮಂಗಳೂರಿನ ಲಯನ್ಸ್ ಅಶೋಕ ಸೇವಾ ಭವನ ನಡೆಯಿತು.

ವೇದಿಕೆಯಲ್ಲಿರುವ ಗಣ್ಯರು ದೀಪ ಉದ್ಘಾಟನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್* ಹಾಗೂ *ದಕ್ಷಿಣ ಕನ್ನಡ & ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ನ
ನೂತನ ಅಧ್ಯಕ್ಷರಾಗಿ ಪ್ರಶಾಂತ್ ಶೆಣೈ,ಉಪಾಧ್ಯಕ್ಷ ರಾಗಿ ಇಮ್ತಿಯಾಜ್,ಕಾರ್ಯದರ್ಶಿಯಾಗಿ ಹರಿಹಂತ್ ಜೈನ್,ಕೋಷಧಿಕಾರಿಯಾಗಿ ರಾಘವೇಂದ್ರ ಪ್ರಭು ರವರು ಆಯ್ಕೆಯಾದರು.ಗೌರಾಧ್ಯಕ್ಷರಾಗಿ ಗುರುದತ್ ಕಾಮತ್, ಸ್ಥಾಪಕ ಅಧ್ಯಕ್ಷ ಅಬ್ದುಲ್ ಸಲೀಂ ಸಂಘಟನೆಗೆ ಶಕ್ತಿ ತುಂಬಿದ್ದಾರೆ.
ರೋಹನ್ ಕಾರ್ಪೋರೇಶನ್ ನ ಛೇರ್ಮನ್ ರೋಹನ್ ಮೊಂತೇರೊ ಅವರು ಮಾತನಾಡಿಒಗ್ಗಟ್ಟು ಇದ್ದರೆ ಸವಾಲುಗಳನ್ನು ಎದುರಿಸಬಹುದು ಅದಕ್ಕಾಗಿ ನಾವು ಸಂಘಟನೆಯನ್ನು ಬಲಪಡಿಸಬೇಕು ಸಂಘಟನೆಯ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯ.ಮೊಬೈಲ್ ಉದ್ಯಮದಲ್ಲಿ ಉಡುಪಿ ಹಾಗೂ ದ.ಕ ವಾರ್ಷಿಕ ವಹಿವಾಟುವಟು ೩೫೦೦ ಕೋಟಿ ರೂ. ಇದ್ದು ಒಂದು ಆರ್ಥಿಕತೆಯ ದೊಡ್ದಭಾಗವಾಗಿದೆ.3600 ಕೋಟಿ ವ್ಯಾಪಾರ ಸಣ್ಣ ವ್ಯಾಪಾರ ಅಲ್ಲ ಇದು ಮುಂದೆ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು. ಸಂಘಟನೆ ಇದ್ದಾಗ ಯಾವುದೇ ಬೇಡಿಕೆ ಈಡೇರಿಸಿ ಕೊಳ್ಳಲು ಸಾಧ್ಯ. ಇಂದು ಯಾವುದೇ ವ್ಯಾಪಾರಇರಲಿ ನಿತ್ಯ ಸವಾಲು ಎದುರಾಗುತ್ತಿದ್ದು ಒಕ್ಕೂಟ ದಿಂದ ಮಾತ್ರ ಪರಿಹಾರ ದೊರಕಲಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ರವಿ ಕುಮಾರ್ ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಮೊಬೈಲ್ ವಿತರಕರು ಹೊಂದಿದ್ದು ಇದೊಂದು ಕರಾವಳಿ ಭಾಗದ ಅತಿ ದೊಡ್ದ ಸಂಘಟನೆಯಾಗಿದೆ. 450 ಕ್ಕೂ ಜಾಸ್ತಿ ಮೊಬೈಲ್ ಮಾರಾಟ ಮಳಿಗೆ ಹೊಂದಿದ್ದು ಅಧಿಕೃತವಾಗಿ ನೊಂದಾಯಿಸಲಾಗಿದೆ.ಈ ಸಂಘ ಸಾಮಾಜಿಕ ಕಾರ್ಯ ದಲ್ಲೂ ತೊಡಗಿದ್ದು ಇದೊಂದು ಬಲಿಷ್ಠ ಸಂಘಟನೆಯಾಗಿದೆ ಎಂದು ತಿಳಿಸಿದರು.ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಒತ್ತು ನೀಡಿ, ಆ ಮೂಲಕ ಗ್ರಾಹಕರಿಗೆ ಸೇವೆಯನ್ನು ನೀಡಬೇಕೆಂದರು. ಸಂಘಟನೆಯ ಮೂಲಕ ಜಟಿಲ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ,ಉದ್ದಿಮೆಯನ್ನು ಅಭಿವೃದ್ಧಿ ಪಡಿಸುವುದು ಸಂಘಟನೆಯನ್ನು ಬಲಪಡಿಸುವುದು ನಮ್ಮ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ 20 ವರ್ಷದಿಂದ ಅಧಿಕ ಅವಧಿಗೆ ಮಂಗಳೂರು ಮಹಾನಗರ. ಪಾಲಿಕೆಯ ಪೌರ ಕಾರ್ಮಿರಾಗಿ ದುಡಿಯುತ್ತಿದ್ದ ಗಿರಿಜಾ,ನಾಗರಾಜ್ ,ಹಾಗೂ ಜಯಮ್ಮ ರವರನ್ನು ವೇದಿಕೆಯಲ್ಲಿರುವ ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿಕ್ರಿಯೆಟಿವ್ ಎಜುಕೇಷನ್ ಫೌಂಡೇಶನ್ ನ್ ಅಶ್ವಥ್ ಎಸ್ ಎಲ್,ಆದರ್ಶ್ ಎಂ ಕೆ,ರವಿ ಕುಮಾರ್, ಮೋಹನ್ ರಾಘವೇಂದ್ರ ಪ್ರಭು ಈ ಸಂಧರ್ಭದಲ್ಲಿ ಗೌರವ ಅಧ್ಯಕ್ಷರು ಗುರುದತ್ತ್ ಕಾಮತ್,ಹಾಗೂ ಸ್ಥಾಪಕ ಅಧ್ಯಕ್ಷರಾಗಿ ಅಬ್ದುಲ್ ಸಲೀಮ್ ರವರು ಉಪಸ್ಥಿತರಿದ್ದರು.