ಮಂಗಳೂರು : ರಾಜ್ಯದಲ್ಲಿ ಆರ್ಥಿಕ , ಸಾಮಾಜಿಕ , ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂದು ಜಾತಿ ಸಮೀಕ್ಷೆಯನ್ನು ಕೈಗೊಳ್ಳಗಾಗಿದೆ . ಇಂದು ಈ ಭಾಗದ ಕಾಂಗ್ರೆಸ್ ಪಕ್ಷದ ಹಿಂದುಳಿದ ಮುಖಂಡರನ್ನು ಒಗ್ಗೂಡಿಸಿಕೊಂಡು ಸಾಮಾಜಿಕ ನ್ಯಾಯ – ನಮ್ಮ ಸಂವಿಧಾನ ಬದ್ಧವಾದ ಹಕ್ಕು ನಾವೆಲ್ಲರೂ ಒಂದೇ ಎನ್ನುವ ಕಲ್ಪನೆಯಲ್ಲಿ ಸಭೆಯನ್ನು ಕೈಕೊಳ್ಳಲಾಗಿದೆ.ಸಮೀಕ್ಷೆ ಬಗ್ಗೆ ಅವಿರೋಧವಾಗಿ ಮಾತನಾಡುವುದು ಜನ ದೋಷಿಗಳು ಪ್ರಹ್ಲಾದ್ ಜೋಶಿಯವರಿಗೆ ಜವಾಬ್ದಾರಿಯಿಲ್ಲ ಅದರಿಂದ ಈ ರೀತಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಮೀಕ್ಷೆಯಲ್ಲಿ ಬರುವ ಅಂಕಿ ಅಂಶವೇ ಮಾನದಂಡವಾಗಿ ನಾವು ಸ್ವೀಕರಿಸಬೇಕೆಂದು ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷರಾದ ವಿ ಆರ್ ಸುದರ್ಶನ್ ಕುಮಾರ್ ತಿಳಿಸಿದರು .
ಅವರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಈಗಾಗಲೇ ಹಿಂದುಳಿದ ಮುಖಂಡರನ್ನು ಒಗ್ಗೂಡಿಸಿಕೊಂಡು ಬೆಂಗಳೂರು , ಕಲಬುರಗಿ , ಮೈಸೂರು , ಬೆಂಗಳೂರಿನಲ್ಲಿ ಸಭೆಯನ್ನು ಕೈಕೊಳ್ಳಲಾಗಿದೆ . ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧು ಬಂಗಾರಪ್ಪರ ನೇತ್ರಿತ್ವದಲ್ಲಿ ಈ ಸಭೆಯನ್ನು ನಡೆಸಲಾಗಿದೆ . ಸಮೀಕ್ಷೆಯಲ್ಲಿ ಬರುವ ಅಂಕಿ ಅಂಶವನ್ನು ಮಾನದಂಡವಾಗಿ ಅನುಸರಿಸುವ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು .
ಈಗಾಗಲೇ ಈ ಸಮೀಕ್ಷೆಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕೆಲವು ರಾಜಕೀಯ ನಾಯಕರು ಮಾಡಿದ್ದಾರೆ . ಇದು ಉತ್ತಮವಾದ ನಡವಳಿಕೆಯಲ್ಲ . ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ,ಯಾಕೆಂದರೆ ಇದು ಕರ್ನಾಟಕ ಜನರ ಅಭಿವೃದ್ಧಿಗೆ ಸಹಕಾರಿಯಾಗಲೆಂದೇ ಸಮೀಕ್ಷೆ ನಡೆಸಲಾಗುತ್ತಿದೆ .ಸಮೀಕ್ಷೆಯನ್ನು ೧೦ ವರ್ಷಕ್ಕೊಮ್ಮೆ ಮಾಡಬೇಕಾದ ಕೇಂದ್ರ ಸರಕಾರ ಯಾವುದೇ ಸಮೀಕ್ಷೆಯನ್ನು ಮಾಡದೇ ಕಾಲ ಹರಣ ಮಾಡುತ್ತಿದೆ . ಇದೀಗ ರಾಜ್ಯ ಸರಕಾರ ಕೈಕೊಂಡ ಸಮೀಕ್ಷೆಯನ್ನು ಪ್ರಶ್ನೆ ಮಾಡುತ್ತಿದೆ . ಇದು ಕೇವಲ ಹಿಂದುಳಿದ ವರ್ಗದವರ ಮಾತ್ರ ಸಮೀಕ್ಷೆಯಲ್ಲ ಬದಲಿಗೆ 7 ಕೋಟಿ ಕನ್ನಡಿಗರ ಸಮೀಕ್ಷೆ ಕೂಡ ಆಗಿದೆ .
ಸುದ್ದಿಗೋಷ್ಠಿಯಲ್ಲಿ ಮಧು ಬಂಗಾರಪ್ಪ ಮಾತನಾಡಿ , ಸಮಾನತೆಯನ್ನು ತರುವಲ್ಲಿ , ಅಂಬೇಡ್ಕರ್ ಅವರ ಸಮಾನತೆಯ ವ್ಯವಸ್ಥೆ ಜಾರಿಗೆ ಬರಲು ಇದು ಸಹಕಾರಿಯಾಗಲಿದೆ . ಇಡೀ ರಾಜ್ಯದಲ್ಲಿ ಈಗಾಗಲೇ 81 ಶೇಕಡಕ್ಕೂ ಅಧಿಕ ಸಮೀಕ್ಷೆ ನಡೆದಿದೆ .ಈಗಾಗಲೇ ಸಮೀಕ್ಷೆ ಮುಂದುವರೆಯಬೇಕ್ಕೆನ್ನುವ ಹಿನ್ನಲೆಯಲ್ಲಿ ಶಾಲೆಗಳಿಗೆ 18 ನೇ ತಾರೀಕಿನ ತನಕ ರಜೆಯನ್ನು ನೀಡಲಾಗಿದೆ ಎಂದರು . ಸಾಮಾಜಿಕ, ಶೈಕ್ಷಣಿಕ, ಅರ್ಥಿಕವಾಗಿ ಹಿಂದುಳಿದವರ ಸಮಸ್ಯೆಯನ್ನು ಬಗೆ ಹರಿಸಲು ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ . ಸಮಾಜದಲ್ಲಿ ಅರ್ಥಿಕವಾಗಿ ಸಬಲವಾದ ಸಮುದಾಯದಲ್ಲೂ ದುರ್ಬಲರು ಇದ್ದಾರೆ ಅವರ ಶ್ರೇಯೋಭಿವ್ರಿದ್ದಿ ನಮಗೆ ಅಗತ್ಯ ಎಂದರು .
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವೇಣು ಗೋಪಾಲ್ , ವಿನಯ್ ಕುಮಾರ್ ಸೋರಕ್ಕೆ , ಪದ್ಮರಾಜ್ ಆರ್ , ವಿಶ್ವಾಸ್ ದಾಸ್ ಮುಂತಾದವರು ಉಪಸ್ಥಿತರಿದ್ದರು