ಮಂಗಳೂರು ; ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬ ಮಾತಿನಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಸಂದರ್ಭದಲ್ಲಿಯೇ ಗಮನಾರ್ಹ ಸಾಧನೆಯನ್ನು ಮಾಡಿ ಹೆಸರು ಮಾಡಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ಉದ್ಯೋಗ ಕ್ರಾಂತಿಯನ್ನೇ ಸೃಷ್ಟಿಸಲು ಮುಂದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2015ರಲ್ಲಿ ಆರಂಭವಾಗಿ ಕಂಪ್ಯೂಟರ್ ಸೇವೆಯ ಮೂಲಕ ಆರಂಭವಾದ ಸಂಸ್ಥೆ 2019ರಲ್ಲಿ ಕಾರ್ಪೋರೇಟ್ ಜಗತ್ತಿಗೆ ಕಾಲಿಟ್ಟಿತ್ತು ಹಲವಾರು ಸರ್ಕಾರಿ ಹಾಗೂ ಎಂಎನ್ ಸಿ ಕಂಪನಿಗಳು ಸೇರಿದಂತೆ ಪ್ರತಿಷ್ಠಿತ ಇಂಡಿಯನ್ ನವಿ, ಕೈಗಾ ಅಣುಸ್ಥಾವರ, ಎಂಆರ್ ಪಿಎಲ್ ನಂತಹ ಪ್ರತಿಷ್ಠಿತ ಕಾರ್ಯ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಸೇವೆಯನ್ನು ಮಾಡಿ ಗುರುತಿಸಿಕೊಂಡದ್ದು ಅದಲ್ಲದೆ ಇತರೆ ಸಂಸ್ಥೆಗಳಿಗೂ ತಾಂತ್ರಿಕ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ನಮ್ಮ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಇದೀಗ ಜನಸಾಮಾನ್ಯರಿಗೂ Al ತಂತ್ರಜ್ಞಾನವನ್ನು ತಲುಪಿಸಲು ಮುಂದಾಗಿದೆ. ಈ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ 33 ಕ್ಷೇತ್ರಗಳಿಗೆ AI ಪರಿಚಯಿಸಲಾಗುತ್ತಿದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನು ತಾವು ಒಡ್ಡಿಕೊಳ್ಳುವುದರ ಜೊತೆಗೆ ಭವಿಷ್ಯದ ಕನಸನ್ನು ಕಾಣುವ ವಿದ್ಯಾವಂತ ಯುವಕ/ ತಿಯರಿಗಾಗಿ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉದ್ಯೋಗಾವಕಾಶ ವನ್ನು ತೆರೆದಿದೆ ಎಂದು ತಿಳಿಸಿದ್ದಾರೆ.
1020 ಉದ್ಯೋಗಾವಕಾಶ ದೊರಕಿಸುವ ಭರವಸೆ ಬೀಡಿದ್ದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ರಾಜ್ಯದ ಜನರಿಗೆ ಪರಿಚಯಿಸುವ ಅತೀ ದೊಡ್ಡ ಯೋಜನೆಯಲ್ಲಿ ಯುವಕ/ತಿಯರಿಗೆ ರಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಸುವರ್ಣಾವಕಾಶ ಎಂದು ಹೇಳಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲೋಕದಲ್ಲಿ ಹೊಸತನದ ಜೊತೆಗೆ ವಿಭಿನ್ನ ಅನುಭವವನ್ನು ಪಡೆದುಕೊಳ್ಳಲು ಒಟ್ಟು 1020 ಮಂದಿಗೆ ಉದ್ಯೋಗಾವಕಾಶ ಲಭ್ಯವಿದ್ದು ಹಾಗೂ ಆಕರ್ಷಕ ವೇತನ ನೀಡುತ್ತೆವೆಂದು ತಿಳಿಸಿದ್ದಾರೆ.
ಉದ್ಯೋಗಕಾಂಶಿಗಳು ತಿಂಗಳಿಗೆ ರೂ. 25,000 ರಿಂದ ರೂ. 30,000 ದವರೆಗಿನ ವೇತನವನ್ನು ಪಡೆದುಕೊಳ್ಳಲಿದ್ದುನಿಮ್ಮ ತಾಲೂಕಿನಿಂದಲೇ ಕೆಲಸ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಪ್ರತಿ ತಾಲೂಕಿನಿಂದ ಕ್ರಮವಾಗಿ ನಾಲ್ವರನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲ 6 ತಿಂಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಬಗ್ಗೆ ಜಾಗೃತಿ ಮೂಡಿಸಲು ಆಯ್ಕೆಯಾದ ಅಭ್ಯರ್ಥಿಗಳು ಫೀಲ್ಡ್ ನಲ್ಲಿದ್ದು ಕಾರ್ಯ ನಿರ್ವಹಿಸಲು ಸಿದ್ಧವಿರಬೇಕು. ಫೀಲ್ಡ್ ನಲ್ಲಿ ಕೆಲಸ ನಿರ್ವಹಿಸಿ ಅನುಭವ ಪಡೆದುಕೊಂಡ ಬಳಿಕ ಅವರನ್ನು ಸಂಸ್ಥೆಯ ಖಾಯಂ ಉದ್ಯೋಗಿಯಾಗಿ ಕಚೇರಿಗೆ ನೇಮಿಸಲಾಗುತ್ತದೆ ಎಂದು ಹೇಳಿದರು.
ಸಂದರ್ಶನ ಎಲ್ಲಿ ನಡೆಯುತ್ತೆ..?
ದಕ್ಷಿಣ ಕನ್ನಡ ಜಿಲ್ಲೆಯ ಸಂದರ್ಶನವನ್ನು ಫೆ.12, 2025ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ನಡೆಯುವ ಸಂದರ್ಶನವನ್ನು ಫೆ.13, 2025ರಂದು ಮಾಹೆ (ಮಣಿಪಾಲ ಯೂನಿವರ್ಸಿಟಿ) ವಾಣಿಜ್ಯ ವಿಭಾಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಿ ಜಿಲ್ಲಾ ಕೇಂದ್ರದಲ್ಲೂ ಅಭ್ಯರ್ಥಿಗಳ ಆಯ್ಕೆ, ಪಕ್ರಿಯೆ ನಡೆಯಲಿದೆ. ಆಯಾ ತಾಲೂಕಿನ ಅಭ್ಯರ್ಥಿಗಳು ಈ ಲಿಂಕ್ ಮೂಲಕ ನೋಂದಾಯಿಸಿ ವಾಟ್ಸಾಪ್ ಮೂಲಕ ಆಯಾ ಜಿಲ್ಲೆಗಳ ಸಂದರ್ಶನದ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ರೆಸ್ಟ್, ಆಧಾರ್ ಕಾರ್ಡ್ ದಾಖಲಾತಿಗಳು ಕಡ್ಡಾಯ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಸಂಪರ್ಕಿಸಿ
ជ : 7349740777
: career@yaticorp.com
ಪತ್ರಿಕಾಗೋಷ್ಠಿಯಲ್ಲಿ ಯತೀ ಕಾರ್ಪ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನ ಸ್ಥಾಪಕರು ಹಾಗೂ ಕಾರ್ಯನಿರ್ವಹಾಧಿಕಾರಿ ಯತೀಶ್ ಕೆಎಸ್.ಕೃಪಾ ಪ್ರಭು,ಭೂಮಿಕಾ ಪೂಜಾರಿ,ಪೃಥ್ವಿ ರಾಜ್ ,ಹಾಗೂ ಕಿರಣ್ ಸಿ.ಸಿ ಯವರು ಉಪಸ್ಥಿತರಿದ್ದರು.