Saturday, March 14, 2026
Flats for sale
Homeಜಿಲ್ಲೆಮಂಗಳೂರು: ಆಟೋ ರಿಕ್ಷಾ ಅಪಘಾತದಲ್ಲಿ ತಾಯಿಯನ್ನು ರಕ್ಷಿಸಿದ ಧೀರ ಬಾಲಕಿಗೆ ಜಿಲ್ಲಾಧಿಕಾರಿ,ಪೊಲೀಸ್ ಕಮಿಷನರ್ ರಿಂದ ಸನ್ಮಾನ…!

ಮಂಗಳೂರು: ಆಟೋ ರಿಕ್ಷಾ ಅಪಘಾತದಲ್ಲಿ ತಾಯಿಯನ್ನು ರಕ್ಷಿಸಿದ ಧೀರ ಬಾಲಕಿಗೆ ಜಿಲ್ಲಾಧಿಕಾರಿ,ಪೊಲೀಸ್ ಕಮಿಷನರ್ ರಿಂದ ಸನ್ಮಾನ…!

ಮಂಗಳೂರು : ರಸ್ತೆ ದಾಟುವ ವೇಳೆ ಡಿಕ್ಕಿಹೊಡೆದು ತಾಯಿಯ ಮೇಲೆ ಮಗುಚಿ ಬಿದ್ದ ಆಟೋರಿಕ್ಷಾ, ಕಣ್ಣ ಮುಂದೆ ಒದ್ದಾಡುತ್ತಿದ್ದ ಅಮ್ಮನ ಉಳಿಸಲು ಗಾಡಿಯನ್ನೇ ಎತ್ತಿದ ಬಾಲಕಿ ವಿಡಿಯೋ ವೈರಲ್ ಆಗಿದ್ದು ಧೀರ ಬಾಲಕಿಗೆ ಸಿ.ಎಂ ಸಿದ್ದರಾಮಯ್ಯ ಶ್ಲಾಘಿಸಿದ್ದು ಅದರ ಜೊತೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ (ಡಿಸಿ) ಮುಲ್ಲೈ ಮುಹಿಲನ್ ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಂಗಳವಾರ ವೈಭವಿಯನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಗೌರವಿಸಿದ್ದಾರೆ.

7ನೇ ತರಗತಿ ವಿದ್ಯಾರ್ಥಿನಿ ವೈಭವಿ ಅವರನ್ನು ಜಿಲ್ಲಾಧಿಕಾರಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಆಕೆಯ ಸಮಯಪ್ರಜ್ಞೆ ಮತ್ತು ಧೈರ್ಯಕ್ಕಾಗಿ ಅವರು ಬಾಲಕಿಯನ್ನು ಶಹಬಾಷ್ ಎಂದಿದ್ದಾರೆ. ಇಂತಹ ಅರಿವು ಮತ್ತು ಶೌರ್ಯವನ್ನು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ತುಂಬಬೇಕು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಅಪಾರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ವೈಭವಿ ಪೋಷಕರು ಉಪಸ್ಥಿತರಿದ್ದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವೈಭವಿಯ ಧೈರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ತಾಯಿ ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular