ಮಂಗಳೂರು ; ನಮ್ಮ ಮಿಡಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾ ಇದೇ ವರ್ಷ 2025 ನೇ ಜನವರಿ 31 ಕ್ಕೆ ತುಳುನಾಡಿನಾದ್ಯಂತ ಅದ್ದೂರಿ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ 160 ದಿನಕ್ಕೂ ಹೆಚ್ಚು ಪ್ರದರ್ಶನಗೊಂಡಿದ್ದು ತುಳುನಾಡಿನ ಚಿತ್ರಾಭಿಮಾನಿಗಳ ಮನಸ್ಸು ಮುಟ್ಟುವಲ್ಲಿ ಯಶಸ್ವಿಯಾಗಿದೆ. ತದನಂತರ ಅದೆಷ್ಟೋ ಊರುಗಳಿಂದ ರಾಜ್ಯಗಳಿಂದ ದೇಶಗಳಿಂದ. ಸಿನಿಮಾ ನೋಡುವ ಇಚ್ಛೆಯನ್ನು ವೀಕ್ಷಕರು ನಮ್ಮಲ್ಲಿ ತಿಳಿಸಿದ್ದು ವೀಕ್ಷಕರ ಕೋರಿಕೆಯಂತೆ ವಿಶ್ವದಾದ್ಯಂತ ಇರುವ ತುಳು ಚಿತ್ರಾಭಿಮಾನಿಗಳ ಮನೆ ಮನೆಗೆ ತಲುಪಲು ನಾವು ನಮ್ಮ ಮಿಡಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾವನ್ನು ನಮ್ಮ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್ Vaibhav Flix ಮೂಲಕ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿರುತ್ತೇವೆ. ದಿನಾಂಕ ಅಕ್ಟೋಬರ್ 25 ಶನಿವಾರದಿಂದ ಈ ಸಿನಿಮಾ ಜನರಿಗೆ ನೋಡಲು ಲಭ್ಯವಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರು ಆನಂದ್ ಎನ್.ಕುಂಪಾಲರವರು ತಿಳಿಸಿದ್ದಾರೆ.
ಈ ಚಿತ್ರವನ್ನು ರಾಹುಲ್ ಅಮೀನ್ ನಿರ್ದೇಶನ ಮಾಡಿರುತ್ತಾರೆ. ರೋಹನ್ ಕಾರ್ಪೋರೇಷನ್ ಅರ್ಪಿಸುವ ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮಂಟ್ ಪ್ರೊಡಕ್ಷನ್, ಎಚ್ ಪಿ ಆರ್ ಫಿಲಂಸ್ ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಎನ್ ಕುಂಪಲ ರವರು ನಿರ್ಮಾಣ ಮಾಡಿರುತ್ತಾರೆ. ವಿನಿತ್ ಕುಮಾರ್ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರವ್ ರಾಮ ಕುಂಜ, ಕದ್ರಿ ನವನೀತ್ ಶೆಟ್ಟಿ, ಸಾಹಿಲ್ ರೈ, ಮೈಮ್ ರಾಮ್ ದಾಸ್, ರೂಪಾ ವರ್ಕಾಡಿ, ಚೈತ್ರ ಶೆಟ್ಟಿ, ಗಿರೀಶ್ ನಾರಾಯಣ್, ಡೊನಿ ಆಶಾ ಕೊರಿಯ ಕಲಾವಿದರಾಗಿ ಅಭಿನಯಿಸಿದ್ದಾರೆ.
ಇದೇ ತಂಡ ಈ ಹಿಂದೆ ರಾಜ್ ಸೌಂಡ್ಸ್ & ಲೈಟ್ಸ್ ಎಂಬ ಹಿಟ್ ಸಿನಿಮಾ ನೀಡಿರುತ್ತದೆ ಆ ಚಿತ್ರವೂ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಕಂಡಿತ್ತು.
ಛಾಯಾಗ್ರಹಣ – ವಿಷ್ಣು ಪ್ರಸಾದ್ ಸಂಗೀತ ನಿರ್ದೇಶಕರು – ಸೃಜನ್ ಕುಮಾರ್ ತೋನ್ಸೆ, ವಸ್ತ್ರಾಲಂಕಾರ – ವರ್ಷ ಆಚಾರ್ಯ, ನೃತ್ಯ ಸಂಯೋಜನೆ – ನವೀನ್ ಶೆಟ್ಟಿ ಮತ್ತು ವಿನಾಯಕ್ ಆಚಾರ್ಯ,ಸಂಕಲನ – ವಿಶಾಲ್ ದೇವಾಡಿಗ,ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಸುಹಾನ್ ಪುಸಾದ್, ಭರತ್ ಕುಮಾರ್ ಗಟ್ಟಿ, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ಕ್ಷಿತಿಂದ ಕೋಟೆಕಾರ್, ಕಿರಣ್ ಶೆಟ್ಟಿ, ಸ್ವಸ್ತಿಕ್ ಆಚಾರ್ಯ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ರಾಹುಲ್ ಅಮೀನ್,ಭರತ್ ಗಟ್ಟಿ,ನಿತೀನ್ ರಾಜ್ ಶೆಟ್ಟಿ,ಸಮಂತಾ ಅಮೀನ್ ಹಾಗೂ ಪವನ್ ಕುಮಾರ್ ಉಪಸ್ಥಿತರಿದ್ದರು.