ಮಂಗಳೂರು : ಅಸ್ತ್ರ ಪ್ರೊಡಕ್ಷನ್‌ನ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ ‘ಮೀರಾ ತುಳು ಮೂವಿ ಫೆ.21ರಂದು ತೆರೆ ಕಾಣಲಿದೆ. ಚಿತ್ರದ ಟೀಸರ್ ಬಿಡುಗಡೆ ಮತ್ತು ಸಿನೆಮಾ ಬಗ್ಗೆ ಮಾಹಿತಿಯನ್ನ ವಿಭಿನ್ನ ರೀತಿಯಲ್ಲಿ ಚಿತ್ರ ತಂಡ ಹಂಚಿಕೊಂಡಿದ್ದಾರೆ
ತುಳು ಸಿನಿಮಾ ರಂಗದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಹಿಳೆಯನ್ನ ಪ್ರಧಾನವಾಗಿಟ್ಟು ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ..ಅಸ್ತ್ರ ಪ್ರೊಡಕ್ಷನ್ ತುಳು ಸಿನೆಮಾ ‘ಮೀರಾ’ ಫೆಬ್ರವರಿ 21 ರಂದು ತೆರೆಗೆ ಬರಲಿದ್ದು, ಇದರ ಟೀಸರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.ಅಸ್ತ್ರ ಪ್ರೊಡಕ್ಷನ್ ನ ರೂವಾರಿ ಹಾಗೂ ಉದ್ಯಮಿ ಲಂಚೂಲಾಲ್ ಕೆ.ಎಸ್ ಅವರು ಈ ಸಿನೆಮಾ ನಿರ್ಮಾಣ ಮಾಡಿದ್ದು ಕೇರಳದ ಅಶ್ವತ್ ನಿರ್ದೇಶನ ಮಾಡಿದ್ದಾರೆ. ಮೀರಾ ಕಮರ್ಷಿಯಲ್ ಸಿನೆಮಾ ಆಗಿದ್ದು ಐದು ಹಾಡುಗಳ ಜೊತೆ ಉತ್ತಮ ಕಥೆಯನ್ನು ಹೊಂದಿದೆ. ಕಾಮಿಡಿ ಕೂಡಾ ಇದ್ದು ಫೈಟಿಂಗ್ ಕೂಡಾ ಈ ಸಿನೆಮಾದಲ್ಲಿ ಇದೆ. ಮೀರಾ ಆಗಿ ಲಂಚೂಲಾಲ್ ಪುತ್ರಿ ಲಕ್ಷ್ಯಾ ಬಾಲನಟಿಯಾಗಿ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಕಾಸರಗೋಡು ಮೂಲದ ಇಷಿಕಾ ಶೆಟ್ಟಿ ನಾಯಕ ನಟಿಯಾಗಿ ಮೀರಾ ಪಾತ್ರ ನಿರ್ವಹಿಸಿದ್ದಾರೆ.
ಮೀರಾ ಸಿನೆಮಾದಲ್ಲಿ ಬಹುತೇಕ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ಕೇರಳದವರಾಗಿದ್ದು ತುಳು ಸಿನಿ ಇಂಡಸ್ಟ್ರಿಗೆ ತಮ್ಮ ಕೊಡುಗೆ ನೀಡಲು ಮುಂದಾಗಿದ್ದಾರೆ. ಹಾಗಂತ ತುಳು ಸಿನೆಮಾ ಇಂಡಸ್ಟ್ರಿಯ ಕೆಲವು ಪ್ರಸಿದ್ದ ಕಲಾವಿದರ ಸಿನೆಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಂಚೂಲಾಲ್ ಕೂಡಾ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೆಷವಾಗಿ ಸಿನೆಮಾದಲ್ಲಿ ಕೆಲವೊಂದು ಹಾಡುಗಳಲ್ಲಿ ಎಐ ತಂತ್ರಜ್ಞಾನದ ಬಳಕೆ ಮಾಡಿರುವುದ ಗಮನಾರ್ಹ. ಇದೊಂದು ಮಹಿಳೆಯರ ಸಹಿತ ಎಲ್ಲಾ ವರ್ಗದ ಜನರನ್ನು ಸೆಳೆಯುವ ಸಿನೆಮಾವಾಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸಿನೆಮಾ ವೀಕ್ಷಣೆಯ ಸಂದರ್ಭದಲ್ಲೇ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡುವ ಕೆಲವೊಂದು ಕಲಾವಿದರು ತೆರಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅದು ಯಾರು ಅನ್ನೋ ರಹಸ್ಯವನ್ನು ಸಿನೆಮಾದಲ್ಲೇ ನೋಡಬೇಕು ಎಂದು ನಿರ್ಮಾಪಕ ಲಂಚುಲಾಲ್ ಹೇಳಿದ್ದಾರೆ.
ಮೀರಾ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಚಿತ್ರದಲ್ಲಿ ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ.ತುಮಿನಾಡು, ಪ್ರಕಾಶ್ ತುಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವೋರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್ ಮೊದಲಾದ ಹೆಸರಾಂತ ಕಲಾವಿದರ ಜತೆ ಮುಂಬೈ ಮೂಲದ ತುಳು ಬ್ಲಾಗರ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನಕನಸುಗಳನ್ನು ನನಸಾಗಿಸುವ ಪಯಣದಲ್ಲಿ ಸಮಾಜದಿಂದ ಸವಾಲುಗಳನ್ನು ಎದುರಿಸುವ ಯುವತಿಯ ಕಥೆಯನ್ನು ಈ ಚಿತ್ರ ಹೇಳಲಿದೆ. ನಿರ್ದೇಶಕರು ಹಾಗೂ ನಿರ್ಮಾಪಕರು ಕೊಟ್ಟಿರುವ ಪಾತ್ರಕ್ಕೆ ಜೀವ ತುಂಬುವ ಕೆಲಸ ಆಗಿದೆ.ನನ್ನ ಮೇಲೆ ನಂಬಿಕೆ ಇಟ್ಟುಕೊಂಡು, ಚಿತ್ರದಲ್ಲಿ ಅವಕಾಶ ಕೊಟ್ಟಿರುವುದಕ್ಕೆ ಅಭಾರಿಯಾಗಿದ್ದೇನೆ ಅಂತಾ ನಟ ಯತೀಶ್ ಪೂಜಾರಿ ತಮ್ಮ ಅನುಭವ ಹಂಚಿಕೊಂಡರು.
ಈ ವೇಳೆ ಮೀರಾ’ ಚಲನಚಿತ್ರದ ಡಿಒಪಿ ಅಜಯ್ ಕೆ.ಎಸ್, ಸಂಕಲನ
ಜಾಬಿನ್ಸ್ ಸೆಬಾಸ್ಟಿಯನ್ ,ಸಂಗೀತ ಸಂಯೋಜನೆ ರಜ್ನು ಜಯಪ್ರಕಾಶ್ ಸೇರಿದಂತೆ ಚಿತ್ರದ ಪ್ರಮುಖರು ಭಾಗಿಯಾಗಿದ್ರು.ಮಹಿಳಾ ಪ್ರಾತಿನಿಧ್ಯತೆ ಇರುವ ಸಿನೆಮಾ ಇದಾಗಿದ್ದು ಇದು ತುಳು ಸಿನೆಮಾದಲ್ಲೆ ಮೊದಲ ಪ್ರಯತ್ನವಾಗಿದೆ. ಚಿತ್ರ ತಂಡದ ಪರಿಚಯದ ಜೊತೆಗೆ ಕೊರಿಯಾಗ್ರಾಫರ್ ಗಳನ್ನು ಡ್ಯಾನ್ಸ್ ಮೂಲಕ ಪರಿಚಯಿಸಲಾಗಿದೆ. ಅಸ್ತ್ರ ಪ್ರೊಡಕ್ಷನ್ ನ ಈ ಸಿನೆಮಾದ ಬಗ್ಗೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಕಾರ್ಯಕ್ರಮದಲ್ಲಿ ಬೀದಿ ನಾಯಿಗಳ ರಕ್ಷಣೆ ಮಾಡುತ್ತಿರುವ ರಜನಿ ಶೆಟ್ಟಿ ಅವರಿಗೆ ಸನ್ಮಾನಿಸಿ ಒಂದು ತಿಂಗಳಿಗೆ ತಗುಲುವ ಖರ್ಚನ್ನು ನೀಡಿ ಸಹಕರಿಸಲಾಗಿದೆ. ಫೆಬ್ರವರಿ 21 ರಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಮಂದಿರದಲ್ಲಿ ತೆರೆಕಾಣಲಿದೆ. ಇದರ ಜೊತೆಗೆ ಕಾಸರಗೋಡು ಜಿಲ್ಲೆಯಲ್ಲೂ ಸಿನೆಮಾ ರಿಲೀಸ್ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.