Thursday, March 12, 2026
Flats for sale
Homeಜಿಲ್ಲೆಮಂಗಳೂರು ; ಅವೈಜ್ಞಾನಿಕವಾಗಿ ನಿರ್ಮಿಸಿದ ಕದ್ರಿ ಪಾರ್ಕ್ ಸ್ಮಾರ್ಟ್ ಸಿಟಿ ರಸ್ತೆಗೆ ಟೋಲ್ ಬರೆ, 12...

ಮಂಗಳೂರು ; ಅವೈಜ್ಞಾನಿಕವಾಗಿ ನಿರ್ಮಿಸಿದ ಕದ್ರಿ ಪಾರ್ಕ್ ಸ್ಮಾರ್ಟ್ ಸಿಟಿ ರಸ್ತೆಗೆ ಟೋಲ್ ಬರೆ, 12 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಿದರೂ ಬಡಜನರಿಗೆ ಬರೆ,ಆಕ್ರೋಶಗೊಂಡ ಸ್ಥಳೀಯರು..!

ಮಂಗಳೂರು ; ಅವೈಜ್ಞಾನಿಕವಾಗಿ ನಿರ್ಮಿಸಿದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಾರಿ ಗೋಲ್ಮಾಲ್ ನಡೆದಿರುವಂತಹದು ನಿಜ ಆದರೆ ಈ ವರೆಗೆ ಒಂದು ಮಳಿಗೆಯನ್ನು ಖರೀದಿಗೆ ತಯಾರಿರದ ಜನರು ಕೊನೆಗೆ ಬೇಸತ್ತು ಟೆಂಡರ್ ಮೂಲಕ ಇತರ ಕಂಪನಿಗಳಿಗೆ ನೀಡಿ ಬೇರೆ ಉಪಾಯನೇ ಇಲ್ಲದೆ ಮತ್ತೆ ಬೇರೆ ಟೆಂಡರ್ ಕರೆದು ನಡೆದಾಡುವ ರಸ್ತೆಗೆ ಟೋಲ್ ಸಂಗ್ರಹಕ್ಕೆ ಪ್ರಾರಂಭಿಸಿರುವುದು ಸ್ಥಳೀಯರಲ್ಲಿ ಆಕ್ರೋಶ ಉಂಟಾಗಿದೆ.

ಕಳೆದ 2 ವರ್ಷಗಳಿಂದ ಯಾರೇ ಒಬ್ಬರು ವ್ಯಾಪಾರದ ಮಳಿಗೆ ನಿರ್ಮಿಸಲು ಕಾನೂನು ತೊಡಕಾಗಿದ್ದು ಇದಕ್ಕೆ ಸ್ಥಳೀಯ ಕಾರ್ಪೊರೇಟರ್ ಹಾಗೂ ಜನಪ್ರತಿನಿಧಿಗಳು ಕಾರಣವೆಂದು ಮೂಲಗಳು ತಿಳಿಸಿವೆ. ಇಲಾಖೆಗೆ ಸಂಬಂಧಪಟ್ಟ ಮಳಿಗೆಗಳನ್ನು ಬಿಜೆಪಿ ಕಾಂಗ್ರೆಸ್ ಎನ್ನದೆ ಪ್ರತಿನಿಧಿಗಳು ಪಡೆದಿದ್ದು ವಿಳಂಬಕ್ಕೆ ರಾಜಕೀಯ ನಾಯಕರು ಕೂಡ ಕಾರಣವೆಂದು ತಿಳಿದುಬಂದಿದೆ .ಇದೀಗ ಈ ರಸ್ತೆಗೆ ಬೋಲ್ ಅಳವಡಿಸುವ ಮೂಲಕ ಈ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಶುಲ್ಕ ವಿಧಿಸಲು ಚಿಂತನೆ ನಡೆಸಲಾಗಿದ್ದು, ಜನವರಿ ತಿಂಗಳಿನಿಂದ ಇದು ಜಾರಿಗೆ ಬರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಎಚ್ಚೆತ್ತ ನಾಗರಿಕರು ಕಾನೂನು ಮೊರೆ ಹೋಗಲು ಚಿಂತಿಸಿದ್ದಾರೆ.

ಕದ್ರಿ ಪಾರ್ಕ್ ರಸ್ತೆಯನ್ನು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಈ ಪಾರ್ಕ್ ಪ್ರವೇಶಿಸುವ ಎರಡು ಕಡೆಗಳಲ್ಲೂ ಅತ್ಯಾಧುನಿಕ ಎಎನ್‌ಪಿಆರ್ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾ ಅಳವಡಿಸಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಟೋಲ್ ವಿಧಿಸಲು ತೀರ್ಮಾನಿಸಲಾಗಿದೆ. ವಾಹನದಲ್ಲಿ ಅಳವಡಿಸಲಾದ ಫಾಸ್ಟ್ರಾಗ್ ಲಿಂಕ್ ಮೂಲಕ ಟೋಲ್ ದರ ಕಡಿತವಾಗಲಿದ್ದು, ಜನವರಿಯಿಂದ ಈ ಯೋಜನೆ ಜಾರಿಯಾಗಲಿದೆ. ಅತ್ಯಾಧುನಿಕ ಎಎನ್‌ಪಿಆರ್ (ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾ ಕಂಪಡಿಸಲಾಗುವುದು ಇದು ವಾಹನದ ನಂಬರ್ ಪ್ಲೇಟ್ ಇಮೇಜ್‌ ನ್ನು ಸೆರೆಹಿಡಿದು ಬಳಿಕ ವಾಹನಗಳ ಫಾಸ್ಟ್ಯಾಗ್‌ಗೆ ಲಿಂಕ್ ಮಾಡುವುದು. ವಾಹನ ಎಂಟ್ರಿಯಾಗಿ 5 ನಿಮಿಷದೊಳಗೆ ಹೊರಗೆ ವಾಹನಗಳಿಗೆ ಪಾವತಿ ಇರುವುದಿಲ್ಲ ಆದರೆ 5 ನಿಮಿಷಗಿಂತ ಹೆಚ್ಚ್ಚಾದರೇ ವಾಹನಗಳಿಗೆ 5೦ ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸಲು ಯೋಜನೆ ನಿರ್ಮಿಸಲಾಗಿದೆ.

ಈ ಅವೈಜ್ಞಾನಿಕ ಯೋಜನೆಯಿಂದ ಕದ್ರಿ ಪಾರ್ಕ್ ಗೆ ಜನ ಬಾರದಂತೆ ಮಾಡುತ್ತಿದ್ದಾರೆಂದು ಸ್ಥಳೀಯ ವ್ಯಾಪಾರಸ್ಥರು ಆಕ್ರೋಶಹೊರಹಾಕಿದ್ದಾರೆ. 100 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಪದುವದಿಂದ ಸರ್ಕ್ಯೂಟ್ ಹೌಸ್‌ವರೆಗೆ ಕದ್ರಿ ಮುಂದೆ ಕಾರು ಪಾರ್ಕ್ ಮಾಡುವವರಿಗೆ ಬರೆ ಹೆಚ್ಚಾಗಲಿದೆ.

ಟೆಂಡ‌ರ್ ವಹಿಸಿಕೊಂಡವರು ಸರ್ಕ್ಯೂಟ್ ಹೌಸ್ ಬಳಿಯ 3 ಅಂಗಡಿಗಳಿಗೆ 1.20 ಲಕ್ಷ ರೂ. ಬಿಡ್ಡಿಂಗ್ ಮಾಡಿದ್ದು . ಬೇರೆ ಶಾಪ್ ಗಳನ್ನು 40 ರಿಂದ 60 ಸಾವಿರ ರೂ.ಗೆ ವಹಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ಬರುವುದು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಮಾರ್ಪಾಡು ಮಾಡಿ ಈಗ ಸರ್ಕ್ಯೂಟ್ ಹೌಸ್ ಕಡೆಯಿಂದ ಕದ್ರಿ ಸಂಗೀತ ಕಾರಂಜಿ ಎಂಟ್ರಿ ವರೆಗೆ 20 ಸಾವಿರ ರೂ. ಬಾಡಿಗೆ 5 ಸಾವಿರ ನಿರ್ವಹಣಾ ವೆಚ್ಚ, 2.50 ಲಕ್ಷರೂ. ಮುಂಗಡ ಹಣ ನಿಗದಿಪಡಿಸಲಾಗಿದೆ, 2 ವರ್ಷ ಈ ಅಂಗಡಿಯನ್ನು ವಹಿಸಿಕೊಂಡವರು ಕಡ್ಡಾಯವಾಗಿ ನಡೆಸಬೇಕು. ಕದ್ರಿ ಪಾರ್ಕ್ ಎಂಟ್ರಿಯಿಂದ ಪಾದುವಾದ ವರೆಗೆ ಅಂಗಡಿಗಳಿಗೆ 15 ಸಾವಿರ ರೂ. ಬಾಡಿಗೆ, 5 ಸಾವಿರ ನಿರ್ವಹಣೆ ವೆಚ್ಚ 2.50 ಲಕ್ಷರೂ. ಮುಂಗಡಣ ಹಣ ನಿಗದಿಪಡಿಸಲಾಗಿದೆ. ಇದರಿಂದ ಮಳಿಗೆ ವಹಿಸಿಕೊಂಡ ವ್ಯಾಪಾರಿಗಳು ನಿಟ್ಟುಸಿರು ಬಿಡುವ ಸಾಧ್ಯತೆಯಿದೆ.

ಆದರೆ ಅಲ್ಲಿರುವ ಅಂಗಡಿಗಳ ಮಾಲೀಕರು ವ್ಯಾಪಾರ ಇಲ್ಲದೆ ಕಂಗಾಲಾಗಿದ್ದು ಮುಂದೆ ಟೋಲ್ ಶುಲ್ಕ ವಿಧಿಸಿದರೆ ದಿನ ಬರುವ ಲಾಭವಿಲ್ಲದ ವ್ಯಾಪಾರವನ್ನು ಕಳೆದುಕೊಳ್ಳುವ ಭಯದಲ್ಲಿದರೆಂದು ಮಾಹಿತಿ ದೊರೆತಿದೆ. ಪಾರ್ಕ್ ರಸ್ತೆಯಲ್ಲಿ ಸುಮಾರು ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆಯಿದೆ. ಈ ರಸ್ತೆಯನ್ನು ಬಳಸುವ ಸ್ಥಳೀಯ ನಿವಾಸಿಗಳಿಗೆ ಪಾಸ್ ಅಥವಾ ಇನ್ನಿತರ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಲಾಗಿದೆ.

ಆದರೆ ಈಗಾಗಲೇ ಈ ಸ್ಮಾರ್ಟ್ ಸಿಟಿ ಯೋಜನೆಯಿಂದ ವ್ಯಾಪಾರಸ್ಥರು ಕಂಗಾಲಾಗಿದ್ದು ಎಲ್ಲವನ್ನು ಕಳೆದುಕೊಂಡು ಪ್ರತಿನಿಧಿಗಳಿಗೆ ಹಿಡಿಶಾಪಹಾಕುತ್ತಿದ್ದಾರೆ. ಈ ಯೋಜನೆಯಿಂದ ಸ್ಥಳೀಯ ನಿವಾಸಿಗಳಿಗೂ ತೊಂದರೆ ಉಂಟಾಗಿದ್ದು ಮುಂದೆ ಈ ಯೋಜನೆ ವಿರುದ್ದವೇ ಹೋರಾಟ ಸಾಧ್ಯತೆವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular