Wednesday, November 5, 2025
Flats for sale
Homeಜಿಲ್ಲೆಮಂಗಳೂರು : ಅಬಕಾರಿ, ಪಿಡಬ್ಲ್ಯೂಡಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ, ಅಬಕಾರಿ ಉಪಾಯುಕ್ತೆ,ಪಿಡಬ್ಲ್ಯೂಡಿ ಅಧಿಕಾರಿಯನ್ನು ವರ್ಗಾಯಿಸಿ ದಕ್ಷ...

ಮಂಗಳೂರು : ಅಬಕಾರಿ, ಪಿಡಬ್ಲ್ಯೂಡಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ, ಅಬಕಾರಿ ಉಪಾಯುಕ್ತೆ,ಪಿಡಬ್ಲ್ಯೂಡಿ ಅಧಿಕಾರಿಯನ್ನು ವರ್ಗಾಯಿಸಿ ದಕ್ಷ ಅಧಿಕಾರಿಯನ್ನು ನೇಮಿಸುವಂತೆ ಆರ್. ಧನರಾಜ್‌ ಒತ್ತಾಯ…!

ಮಂಗಳೂರು : ಸರಕಾರಿ ಅಧಿಕಾರಿಗಳೇ ಇಷ್ಟೇ ಎಲ್ಲಾ ದೊಡ್ಡ ದೊಡ್ಡ ಕುಳಗಳೇ,ಕೋಟಿಗಟ್ಟಲೆ ಲೂಟಿ ಹೊಡೆದು ಅಕ್ರಮ ಆಸ್ತಿ ಅಂತಸ್ತು ಸಂಪಾದಿಸುವುದರಲ್ಲಿ ನಿಸ್ಸಿಮರು.ಎಂದಿನಂತೆಯೇ ಕಲೆ, ಸಮಾಜಸೇವೆ, ಸಂಘ ಸಂಸ್ಥೆಗಳಂತೆ ತುಳು ಚಿತ್ರರಂಗಕ್ಕೂ ರಾಜ್ಯೋತ್ಸವ ಪ್ರಶಸ್ತಿಯ ಮಾನ್ಯತೆ ನೀಡುವಂತೆ ಕೋರಿದ್ದರೂ ಬಾರಿ ಅದು ಕೈಗೂಡಿಲ್ಲ. ಪ್ರಶಸ್ತಿಯ ಖರ್ಚು ವೆಚ್ಚವನ್ನು ನಾವೇ ಭರಿಸುತ್ತೇವೆ, ರಾಜ್ಯೋತ್ಸವ ದಿನದಂದು ತುಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ದೇಶಕ- ನಿರ್ಮಾಪಕರನ್ನು ಗುರುತಿಸುವ ಕಾರ್ಯ ಇನ್ನಾದರೂ ನಡೆಯಬೇಕು ಎಂದು ಚಿತ್ರ ನಿರ್ಮಾಪಕ ಆರ್‌. ಧನರಾಜ್‌ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಸಿನೆಮಾಗಳಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಸಂದಾಯವಾಗುತ್ತದೆ. ಇಲ್ಲಿನ ಚಿತ್ರರಂಗವೂ ಬಹುದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇದಕ್ಕೆ ಮಾನ್ಯತೆ ನೀಡುವ ಅಗತ್ಯವಿದೆ ಎಂದರು. ವರ್ಷದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿದ್ದೆವು. 2 ತಿಂಗಳ ಹಿಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೇರಿದಂತೆ ಇತರ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದೆವು. ಆದರೆ ತುಳುನಾಡಿನ ಚಿತ್ರರಂಗವನ್ನು ಈ ಬಾರಿಯೂ ಕಡೆಗಣಿಸಿದ್ದಾರೆ ಎಂದು ಧನರಾಜ್‌ ಆಕ್ಷೇಪಿಸಿದರು.ಇತರ ವಿಭಾಗಗಳಂತೆ ತುಳುವಿಗೂ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮಾನ್ಯತೆ ನೀಡಲೇಬೇಕು. ಸರ್ಕಾರದ ಬಳಿ ಇದಕ್ಕೆ ಹಣವಿಲ್ಲ ಎಂದಾದರೆ ಪ್ರಶಸ್ತಿಗೆ ಖರ್ಚಾಗುವ ಮೊತ್ತವನ್ನು ನಾವೇ ಭರಿಸುತ್ತೇವೆ. ಆಗಲಾದರೂ ತುಳು ಚಿತ್ರರಂಗವನ್ನು ಗುರುತಿಸುವ ಕೆಲಸ ನಡೆಯಲಿ ಎಂದು ಆಗ್ರಹಿಸಿದರು.

ಪ್ರಸ್ತುತ ದ.ಕ. ಜಿಲ್ಲೆಯ ಅಬಕಾರಿ ಮತ್ತು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅಬಕಾರಿ ಇಲಾಖೆಯಿಂದ ಸಿಎಲ್‌-7 ಲೈಸನ್ಸ್‌ ನೀಡಲು 20-22 ಲಕ್ಷ ರು. ಲಂಚ ಪಡೆಯಲಾಗುತ್ತಿದೆ. ಸಿಎಲ್‌-7 ಲೈಸನ್ಸ್‌ ಪಡೆಯಲು ಕನಿಷ್ಠ 10 ಕೊಠಡಿಗಳಿರಬೇಕು. ಯಾವ ಮೂಲಸೌಕರ್ಯ ಇಲ್ಲದಿದ್ದರೂ ಲಂಚ ಪಡೆದು ಬೇಕಾಬಿಟ್ಟಿ ಲೈಸನ್ಸ್‌ ನೀಡಲಾಗುತ್ತಿದೆ. ಈ ಹಿಂದೆ ದ.ಕ.ದಲ್ಲಿ ಕೆಲಸ ಮಾಡಿದ ಅಬಕಾರಿ ಉಪಾಯುಕ್ತೆಯನ್ನು ಮರಳಿ ಇಲ್ಲಿಗೆ ನೇಮಕ ಮಾಡಬಾರದು, ಕೂಡಲೆ ಅವರನ್ನು ಬೇರೆಡೆಗೆ ವರ್ಗಾಯಿಸಿ ದಕ್ಷ ಅಧಿಕಾರಿಯನ್ನು ನೇಮಿಸಬೇಕು ಎಂದು ಆರ್. ಧನರಾಜ್‌ ಒತ್ತಾಯಿಸಿದರು. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕಳೆದ 9 ವರ್ಷಗಳಿಂದ ಒಬ್ಬ ಅಧಿಕಾರಿ ಇಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು, ದಕ್ಷ ಅಧಿಕಾರಿಯನ್ನು ನೇಮಿಸಬೇಕು ಎಂದೂ ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular