ಮಂಗಳೂರು ; ಜಿಲ್ಲೆಯಲ್ಲಿ ಇತ್ತೀಚೆಗೆ ಮತ್ತೆ ಲವ್ ಜಿಹಾದ್ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಅನ್ಯಕೋಮಿನ ಇಬ್ಬರು ಯುವಕರ ಹಿಂದೂ ಯುವತಿ ಸುತ್ತಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಯುವತಿಯೊಂದಿಗೆ ಬಿಎಂಡಬ್ಲ್ಯು ಕಾರಿನಲ್ಲಿ ಹೊಗುತ್ತಿರಬೇಕಾದರೆ, ಸ್ಕೂಲ್ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ. ಹೀಗಾಗಿ ಬಸ್ ಚಾಲಕನ ಜೊತೆ ತಂಡ ಜಗಳವಾಡುತ್ತಿದ್ದರು. ಜನ ಸೇರುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾರೆ, ಆದರೆ ಕಾರು ಕೈಕೊಟ್ಟಿದೆ. ಬಳಿಕ ಜನರು ಇವರನ್ನು ಗಮನಿಸಿದ್ದು ಇದು ಅನ್ಯಕೋಮಿನ ಜೋಡಿ ಎಂಬುದು ಬೆಳಕಿಗೆ ಬಂದಿದೆ. ದರ್ಪ ತೋರಿಸುತಿದ್ದ ಯುವಕನನ್ನು ಸಾರ್ವಜನಿಕರು ವಿಚಾರಿಸಿದಾಗ ಈ ಘಟನೆ ತಿಳಿದಿದೆ.ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಜೋಡಿಗಳನ್ನು ವಿಚಾರಿಸಿ ಕಳುಹಿಸಿದರು.