ಮಂಗಳೂರು : ತುಳುನಾಡಿನ ದೈವಗಳ ಕಾರ್ಣಿಕಕ್ಕೆ ಭಕ್ತಿಯಿಂದ ಶರಣಾಗಿ ಬರುವ ಭಕ್ತರು ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಖ್ಯಾತ ನಟ ನಟಿಯರು ದೈವಗಳ ನೇಮೋತ್ಸವದಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಇನ್ನೂ ಅನೇಕರು ಕಾರ್ಣಿಕದ ದೈವಗಳ ಕ್ಷೇತ್ರಕ್ಕೆ ಬಂದು ದೈವದ ಮುಂದೆ ಭಕ್ತಿಯಿಂದ ಪ್ರಾರ್ಥಿಸಿ ಹೋಗಿದ್ದಾರೆ. ಇದೀಗ ತಮಿಳು ಚಿತ್ರರಂಗದ ಸ್ಟಾರ್ ನಟ ವಿಶಾಲ್ ತುಳುನಾಡ ದೈವಕ್ಕೆ ತಲೆಭಾಗಿ ನಮಸ್ಕರಿಸಿದ್ದಾರೆ.
ಮಂಗಳವಾರ ಮುಲ್ಕಿಯ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯನಿಗೆ ನಡೆದ ವಾರ್ಷಿಕ ನೇಮಕ್ಕೆ ತಮಿಳು ನಟ ವಿಶಾಲ್ ಆಗಮಿಸಿದ್ದಾರೆ. ಕೊಲ್ಲೂರು ಮೂಕಾಂಭಿಕೆಯ ದರ್ಶನಕ್ಕೆ ಆಗಮಿಸಿದ್ದ ವಿಶಾಲ್ ಜಾರಂದಾಯನ ಈ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ವಿಶಾಲ್ ಅವರ ಅನಾರೋಗ್ಯದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ಆತಂಕ ವ್ಯಕ್ತಪಡಿಸಿದ್ದರು. ಆದ್ರೆ ಅನಾರೋಗ್ಯ ಇಲ್ಲ ಎಂದು ಹೇಳಿದ್ದ ವಿಶಾಲ್ ಇಂದು ತುಳುನಾಡ ದೈವಗಳ ಸನ್ನಿದಿಯಲ್ಲಿ ತನ್ನ ಅನಾರೋಗ್ಯ ಪರಿಹರಿಸಲು ಕೋರಿಕೊಂಡಿದ್ದಾರೆ. ಈ ವಿಚಾರವನ್ನು ಕ್ಷೇತ್ರದ ಅರ್ಚಕರು ಕೂಡಾ ಹೇಳಿದ್ದು ವಿಶಾಲ್ ಅವರು ಗುಣಮುಖರಾ ಬಳಿಕ ಮತ್ತೆ ಬಂದು ತುಲಾಭಾರ ಸೇವೆ ನೀಡುವಂತ ಸಲಹೆ ನೀಡಿದ್ದಾರೆ.
ಬಳಿಕ ದೈವಗಳ ನೇಮೋತ್ಸವದಲ್ಲೂ ಭಕ್ತಿಯಿಂದ ಭಾಗವಹಿಸಿದ ವಿಶಾಲ್ ಮತ್ತು ಕುಟುಂಬಸ್ಥರು ಸಂಪೂರ್ಣ ನೇಮವನ್ನು ವೀಕ್ಷಿಸಿದ್ದಾರೆ. ಈ ವೇಳೆ ದೀಟಿಗೆ ಹಿಡಿದು ವಿಶಾಲ್ ಮುಂದೆ ನಿಂತ ದೈವ ಕೂಡಾ ಕಣ್ಣೀರು ಹಾಕದಿರು ನಾನಿದ್ದೇನೆ ಎಂದು ಅಭಯ ನೀಡಿದೆ. ಜಾರಂದಾಯ ನೇಮವನ್ನು ವೀಕ್ಷಿಸಿ ವಿಶಾಲ್ ಕನ್ನಡದಲ್ಲೇ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಅವರ ಕಾಂತಾರ ಸಿನೆಮಾ ಮೂಲಕ ಇಲ್ಲಿನ ದೈವಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಕೊಲ್ಲೂರು ಮೂಕಾಂಭಿಕೆಯ ದರ್ಶನ ಮಾಡಿ ಇಲ್ಲಿಗೆ ಬಂದಿದ್ದೇನೆ . ಇದೇ ಮೊದಲ ಬಾರಿ ಇಂತಹ ಒಂದು ಕಾರ್ಯಕ್ರಮ ನೋಡುತ್ತಿರುವ ಕಾರಣ ಏನು ಹೇಳಬೇಕು ಅನ್ನೋದು ಗೊತ್ತಾಗುತ್ತಿಲ್ಲ ಅಂತ ಹೇಳಿದ್ದಾರೆ.
ವಿಶಾಲ್ ಅವರ ಅನಾರೋಗ್ಯದ ವಿಚಾರದಲ್ಲಿ ತಮಿಳುನಾಡಿನಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಆತಂಕ ವ್ಯಕ್ತಪಡಿಸಿದ್ದಾರೆ. 12 ವರ್ಷಗಳ ಹಿಂದೆ ಆರಂಭಿಸಿದ್ದ ಮದಗಜ ರಾಜ ಕಳೆದ ತಿಂಗಳು ತೆರೆಗೆ ಬಂದಿತ್ತಾದ್ರೂ ವಿಶಾಲ್ ಹೊಸ ಸಿನೆಮಾಗೆ ಸಹಿ ಹಾಕಿಲ್ಲ ಎನ್ನಲಾಗಿತ್ತು. ಇದೀಗ ಇದೇ ವಿಚಾರಕ್ಕೆ ತುಳುನಾಡ ದೈವಗಳ ಮೊರೆ ಹೋಗಿ ದೈವಗಳ ಅಭಯ ಪಡೆದುಕೊಂಡು ತೆರಳಿದ್ದಾರೆ.