Saturday, November 23, 2024
Flats for sale
Homeಜಿಲ್ಲೆಮಂಗಳೂರು : ಅಧಿಕ ರಕ್ತದೊತ್ತಡದಿಂದ ಬಸ್ಸಿನ ಚಾಲಕನಿಗೆ ತಲೆಸುತ್ತು,ತಪ್ಪಿದ ನಿಯಂತ್ರಣ ,ಹಲವು ವಾಹನಗಳಿಗೆ ಡಿಕ್ಕಿ, 3...

ಮಂಗಳೂರು : ಅಧಿಕ ರಕ್ತದೊತ್ತಡದಿಂದ ಬಸ್ಸಿನ ಚಾಲಕನಿಗೆ ತಲೆಸುತ್ತು,ತಪ್ಪಿದ ನಿಯಂತ್ರಣ ,ಹಲವು ವಾಹನಗಳಿಗೆ ಡಿಕ್ಕಿ, 3 ಮಂದಿ ಗಾಯ.

ಮಂಗಳೂರು : ಹಂಪನಕಟ್ಟೆ ಬಳಿ ಗುರುವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಆಟೋರಿಕ್ಷಾ, ಕಾರು ಮತ್ತು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಾಯಗಳಾದ ಘಟನೆ ವರದಿಯಾಗಿದೆ.

ಅಧಿಕ ರಕ್ತದೊತ್ತಡದಿಂದ ಬಸ್ಸಿನ ಚಾಲಕನಿಗೆ ತಲೆಸುತ್ತು ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರು ಜೆಪ್ಪು ಬಪ್ಪಲು ನಿವಾಸಿಗಳಾದ ಉಸ್ಮಾನ್, ಅವರ ಪತ್ನಿ ರಮ್ಲಾ ಮತ್ತು ಮಗಳು ಮೊಹಮ್ಮದ್ ನಝಲ್. ಮೂವರು ಆಟೋರಿಕ್ಷಾದಲ್ಲಿ ನಗರಕ್ಕೆ ಬಂದಿದ್ದ ವೇಳೆ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular