ಮಂಗಳೂರು : ಪಿಲಿಕುಳ ಜೈವಿಕ ಉದ್ಯಾನವನನ್ನು ನಿರ್ವಹಿಸಲು ಕಷ್ಟವಾಗುತ್ತದೆಂದು ಈ ಹಿಂದೆ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು ಪ್ರಾಣಿಗಳಿಗೆ ದೈನಂದಿನ ಖರ್ಚುಗಳಿಗೆ ಪ್ರಾಧಿಕಾರದಲ್ಲಿ ಹಣದ ಕೊರತೆ ಎದ್ದುಕಾಣುತ್ತಿತ್ತು.ಇದೀಗ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಿಂದ ಬೃಹತ್ ಕಾಳಿಂಗ ಸರ್ಪ ತಪ್ಪಿಸಿಕೊಂಡ ಘಟನೆ ನಡೆದಿದೆ.
ಜೈವಿಕ ಉದ್ಯಾನವನದ ಟಿಕೆಟ್ ಕೌಂಟರ್ ಬಳಿ ಬಂದಿದ್ದ ಕಾಳಿಂಗ ಸರ್ಪ ಕಂಡು ಜನರು ಹೌಹಾರಿದ್ದಾರೆ. ಬಳಿಕ ರಸ್ತೆ ದಾಟಿ ವಿಜ್ಞಾನ ಕೇಂದ್ರದತ್ತ ಸಾಗಿದ್ದು, ಸಧ್ಯ ಕಾಳಿಂಗ ಸರ್ಪ ಹಿಡಿಯಲು ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ.ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶಪಟ್ಟಿದ್ದು ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದಾರೆ.
ವಿಷಪೂರಿತ ಹಾವು ಕಾಳಿಂಗ ಸರ್ಪವಾಗಿರುವುದರಿಂದ ಸ್ಥಳದಲ್ಲಿ ಸೇರಿದ ಜನಸಾಮನ್ಯರಿಗೆ ದಿಗಿಲುಬಡಿದಂತಾಗಿದೆ,ಸುಮಾರು 7 ಅಡಿಗಿಂತಲೂ ಅಧಿಕ ಗಾತ್ರದ ಕಾಳಿಂಗ ಸರ್ಪವಾಗಿದ್ದು ದೇಶದ ಪ್ರಮುಖ ಮೃಗಾಲಯಗಳಲ್ಲಿ ಇರುವಂತಹ ಗಾತ್ರ ದಷ್ಟ ಪುಷ್ಟವಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.


