ಮಂಗಳೂರು ; ಇನ್ಮುಂದೆ ಮಂಗಳೂರಿನ ವಲಯ – 1 ರ ನಗರ ಮತ್ತು ವಲಯ – 2 ರ ಗ್ರಾಮಾಂತರ ಪ್ರದೇಶದ ಎಲೆಕ್ಟ್ರಿಕ್ ರಿಕ್ಷಾ ಮೆಥೆನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ರಿಕ್ಷಾ ಒಳಗೊಂಡಂತೆ ಎಲ್ಲ ವಿಧದ ಆಟೋ ರಿಕ್ಷಾಗಳು ಬಣ್ಣ ಬದಲಾವಣೆ ಮಾಡಿಕೊಳ್ಳುವಂತೆ ಮಂಗಳೂರಿನ ಪ್ರಭಾರ ಉಪಸಾರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಮಂಗಳೂರಿನ ವಲಯ -1 ರ ಆಟೋರಿಕ್ಷಾಗಳ ಮಧ್ಯಭಾಗದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕು.ರಿಕ್ಷಾದ ಮಧ್ಯಭಾಗದಿಂದ ಮೇಲೆ ಹಳದಿ ಬಣ್ಣ ಬಳಿಯಬೇಕು.
ವಲಯ 1 ಕ್ಕೆ ಚೌಕಕಾರದ ನೀಲಿ ಬಣ್ಣ ಗುರುತಿನ ಸ್ಟಿಕ್ಕರ್ ನ್ನು / ಗುರುತಿನ ಸಂಖ್ಯೆಯನ್ನು ಪೋಲಿಸ್ ಇಲಾಖೆಯಿಂದ ಪಡೆದುಕೊಂಡು ಅಂಟಿಸಬೇಕು.
ವಲಯ -2 ರ ರಿಕ್ಷಾಗಳ ಮಧ್ಯಭಾಗದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕು. ರಿಕ್ಷಾದ ಮಧ್ಯಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯಬೇಕು ಅಲ್ಲದೆ ವೃತ್ತಾಕಾರದ ಹಳದಿ ಬಣ್ಣದ ಗುರುತಿನ ಸಂಖ್ಯೆಯನ್ನು ಪೋಲಿಸ್ ಇಲಾಖೆಯಿಂದ ಪಡೆದುಕೊಂಡು ಅಂಟಿಸಬೇಕೆಂದು ಅದೇಶದಲ್ಲಿ ಇದೆ.