ಮಂಗಳೂರು : ಚಾಲಕ ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ಹಿಮ್ಮುಖವಾಗಿ ಚಲಿಸಿದ ಅಟೋ ಮ್ಯಾಟಿಕ್ ಇವಿ ವಾಹನದಿಂದ ಸರಣಿ ಅಪಘಾತ ಸಂಭವಿಸಿದೆ.
ನಗರದ ರಾಷ್ಟಕವಿ ಗೋವಿಂದ ಪೈ ವೃತ್ತದ ಬಳಿ ಈ ಅಪಘಾತ ಸಂಭವಿಸಿದ್ದು ಏಕಮುಖ ರಸ್ತೆಯಲ್ಲಿ ಸಂಚರಿಸಿದೆ. ಅಟೊಮ್ಯಾಟಿಕ್ ಇವಿ ಕಾರಿನ ಮಾಲೀಕ ಇಲ್ಲಿನ ಎಟಿಎಂ ಬಳಿ ಕಾರು ನಿಲ್ಲಿಸಿ ಹಣ ಡ್ರಾ ಮಾಡಿ ವಾಪಾಸು ಬಂದು ಕಾರಿನಲ್ಲಿ ಕುಳಿತಿದ್ದಾರೆ. ಈ ವೇಳೆ ಗೇರ್ ರಿವರ್ಸ್ ಮೋಡ್ ನಲ್ಲಿ ಇರುವುದು ಗಮನಿಸದೆ ಅಕ್ಸಿಲೇಟರ್ ಅದುಮಿದ್ದಾರೆ. ಈ ವೇಳೆ ವೇಗವಾಗಿ ಕಾರು ರಿವರ್ಸ್ ಚಲಿಸಿದ್ದು ಹಿಂಬದಿಯಿಂದ ಬರುತ್ತಿದ್ದ ಇವಿ ಅಟೋಗೆ ಡಿಕ್ಕಿ ಹೊಡೆದ ಬಳಿಕ ಸರಣಿಯಾಗಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಇತ್ತಿಚ್ಚಿನ ದಿನಗಳಲ್ಲಿ ಆಟೋಮ್ಯಾಟಿಕ್ ಹಾಗೂ ಇವಿ ಕಾರುಗಳ ತರಬೇತಿ ಸರಿಯಾಗಿ ಸಿಗದ ಹಿನ್ನೆಲೆ ಮಹಿಳೆಯರು ಹಾಗೂ ಪುರುಷರಿಗೆ ಕಾರಿನ ಪವರ್ ಬಗ್ಗೆ ಸರಿಯಾದ ಮಾಹಿತಿ ಸಿಗದ ಹಿನ್ನೆಲೆ ಹಲವು ಅಪಘಾತ ಸಂಭವಿಸಿದೆ. ಅಪಘಾತವಾದ ತಕ್ಷಣವೇ ಕಾರು ಚಾಲಕ ಕಾರಿನಿಂದ ಇಳಿದು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಆದರೆ ಮಾಹಿತಿ ಪ್ರಕಾರ ಚಾಲಕನಿಗೆ ಹೈ. ಬಿ.ಪಿಯಿಂದ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಬವಿಸಿದೆಂದು ತಿಳಿದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆಯಲ್ಲಿದ್ದ ಅಪಘಾತಕ್ಕೆ ಒಳಗಾದ ಕಾರುಗಳನ್ನು ತೆರವು ಮಾಡಿ ಸಂಚಾರ ಸುಗಮಗೊಳಿಸಿದ್ದಾರೆ.