ಮಂಗಳೂರು : ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 5ರಂದು ಬಂದಿಳಿದ ಪ್ರಯಾಣಿಕರೊಬ್ಬರು ಅಕ್ರಮವಾಗಿ ಸಾಗಿಸುತ್ತಿದ್ದ 40,40,220 ರೂ ಮೌಲ್ಯದ ಚಿನ್ನಾಭರಣ ಪತ್ತೆಯಾದ್ದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿನ್ನವು 578 ಗ್ರಾಂ ತೂಕವಿದ್ದು, 24 ಕ್ಯಾರೆಟ್ ಮೌಲ್ಯದ್ದಾಗಿದೆ ಎಂದು ತಿಳಿದಿದೆ.
ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿರುವ ಈ ಪ್ರಯಾಣಿಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದು ಅನುಮಾನದ ಮೇಲೆ, ಅಧಿಕಾರಿಗಳು ಆತನನ್ನು ಪರೀಕ್ಷಿಸಿದರು ಮತ್ತು ಅವರ ದೇಹದಲ್ಲಿ ಅಡಗಿಸಿಟ್ಟಿದ್ದ ಮೂರು ಅಂಡಾಕಾರದ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ.ಸದ್ಯ ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.


