Wednesday, November 5, 2025
Flats for sale
Homeಜಿಲ್ಲೆಮಂಗಳೂರು : ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳ ಮೊಟ್ಟೆಯನ್ನು ಆಮ್ಲೆಟ್ ಮಾಡಿ ತಿಂದ ಕಿಡಿಗೇಡಿಗಳು.

ಮಂಗಳೂರು : ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳ ಮೊಟ್ಟೆಯನ್ನು ಆಮ್ಲೆಟ್ ಮಾಡಿ ತಿಂದ ಕಿಡಿಗೇಡಿಗಳು.

ಮಂಗಳೂರು : ಸರಕಾರದಿಂದ ಬರುವ ಮೊಟ್ಟೆಗಳು ಮಕ್ಕಳಿಗೆ ಸಿಗುವುದೇ ಬಾರಿ ಕಷ್ಟ ಆದರೆ ಇಲ್ಲಿ ರಾತ್ರೋರಾತ್ರಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಕ್ಕಳಿಗೆ ನೀಡಲು ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೆಟ್ ಮಾಡಿ ತಿಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಲಿಕಟ್ಟೆಯ ಸಮೀಪ ನಡೆದಿದೆ.

ಸ್ಥಳೀಯರ ಪ್ರಕಾರ ಮೊಟ್ಟೆ ಹಾಗೂ ಎಣ್ಣೆ ಹೊಡೆದು ಕಿಡಿಗೇಡಿಗಳು ತಿಂದು ಸಂಭ್ರಮಿಸಿ ಹೋಗಿರಬರಬಹುದೆಂದು ಮಾಹಿತಿ. ಪ್ರಾಥಮಿಕ ಆರೋಗ್ಯ ಕೇಂದ್ರದ ಸೊತ್ತುಗಳನ್ನು ಕಿಡಿಗೇಡಿಗಳು ನಾಶ ಮಾಡಿ ಗಲೀಜು ಮಾಡಿದ್ದ ವಾರದ ನಂತರ ಬೆಳಕಿಗೆ ಬಂದಿದೆ.

ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಕ್ಕೆ ಬಂದಾಗ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದಿರುವುದನ್ನು ಗಮನಿಸಿದ್ದಾರೆ.ಅಂಗನವಾಡಿ ಪುಟಾಣಿಗಳಿಗೆಂದು ಅಡುಗೆ ಕೋಣೆಯಲ್ಲಿ ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.ಅಷ್ಟೇ ಅಲ್ಲದೆ, ಪಕ್ಕದಲ್ಲಿರುವ ಗ್ಯಾಸ್ ಸ್ಟವ್​ ಮೇಲೆ ಬಾಣಲೆ ಇಡಲಾಗಿದ್ದು, ಅದರಲ್ಲಿ ಆಮ್ಮೆಟ್ ತುಂಡು ಪತ್ತೆಯಾಗಿದೆ.ಕಿಡಿಗೇಡಿಗಳು ಅಂಗನವಾಡಿಗೆ ನುಗ್ಗಿ ಎಣ್ಣೆ ಹೊಡೆದು ಆಮ್ಲೆಟ್ ಮಾಡಿ ತಿಂದಿರುವುದು ದೃಢಪಟ್ಟಿದೆ.

ಇದೀಗ ಸಹಜವಾಗಿ ಸ್ಥಳೀಯರಲ್ಲಿ ಆತಂಕ ಮೂಡಿದ್ದು ಪುತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular