ಬೆಳ್ತಂಗಡಿಯ ; 16 ವರ್ಷದ ಪ್ರಥಮ ಪಿಯುಸಿ ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ವಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಎಂದಿನಂತೆ ಪ್ರಥಮ ಪಿಯುಸಿ ವಿಧ್ಯಾರ್ಥಿನಿ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ECO ಕಾರಿನಲ್ಲಿ ಬಂದ ಮೂವರು ಮಾಸ್ಕ್ ಧಾರಿಗಳು ಅಡ್ಡ ಹಾಕಿ ಚೂರಿ ತೋರಿಸಿ ಬಲವಂತವಾಗಿ ಕಾರಿಗೆ ಎಳೆದು ಕೂರಿಸಲು ಯತ್ನಿಸಿದ್ದಾರೆಂದು ದೂರುದಾಖಲಾಗಿದೆ.
ಈ ವೇಳೆ ವಿದ್ಯಾರ್ಥಿನಿ ಕಿರುಚಾಡಿದ್ದು ಬಳಿಕ ಚೂರಿಯಿಂದ ಕೈಗೆ ಗಾಯಗೊಳಿಸಿದದ್ದಾರೆಂದು ಅರೋಪಿಸಿದ್ದಾರೆ.ಈ ವೇಳೆ ಇದನ್ನು ನೋಡಿದ ಹಿಂದಿನಿಂದ ಬರುತ್ತಿದ್ದ ಅಬ್ಬುಸಾಲಿ ಎಂಬವರು ನೋಡಿ ಯುವತಿಯನ್ನು ರಕ್ಷಿಸಲು ಯತ್ನಿಸಿದ್ದು ಅವರನ್ನುವ ನೋಡಿ ಕಾರಿನಲ್ಲಿದ್ದ ಮೂವರು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.ಬಳಿಕ ಯುವತಿಯನ್ನು ಅಬ್ಬುಸಾಲಿಯವರು ಬೆಳ್ತಂಗಡಿ ಆಸ್ಪತ್ರೆಗೆ ಸೇರಿಸಿದದ್ದುವಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.


