Thursday, March 12, 2026
Flats for sale
Homeಜಿಲ್ಲೆಬೆಳ್ತಂಗಡಿ : ಪ್ರೇತಗಳ ಕಾಟಕ್ಕೆ ಬೆಚ್ಚಿಬಿದ್ದ ಕುಟುಂಬ,ಮೊಬೈಲ್ ನಲ್ಲಿ ವಿಚಿತ್ರ ರೂಪದ ಚಿತ್ರ ಸೆರೆ...!

ಬೆಳ್ತಂಗಡಿ : ಪ್ರೇತಗಳ ಕಾಟಕ್ಕೆ ಬೆಚ್ಚಿಬಿದ್ದ ಕುಟುಂಬ,ಮೊಬೈಲ್ ನಲ್ಲಿ ವಿಚಿತ್ರ ರೂಪದ ಚಿತ್ರ ಸೆರೆ…!

ಬೆಳ್ತಂಗಡಿ : ಕಲಿಯುಗದಲ್ಲಿ ಕುಲೆಗಳ ಉಪಟಳದಿಂದ ಕುಟುಂಬವೇ ಅಸ್ಥಿರಗೊಂಡ ಘಟನೆ ಸುದ್ದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಎಂಬಲ್ಲಿನ ಮನೆಯೊಂದರಲ್ಲಿ ಭೂತದ ಚೇಷ್ಟೆಯಿಂದ ಕುಟುಂಬವೊಂದು ಕಂಗಾಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಎಂಬವರ ಕುಟುಂಬ ಈ ಸಮಸ್ಯೆಗೆ ಸಿಲುಕಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿರುವ ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ನಿತ್ಯ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಸಂಜೆಯಾಗುತ್ತಿದ್ದಂತೆ ಮನೆಯವರು ಭಯ ಭೀತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ತಿಳಿದ ಹಲವಾರು ಜನರು ಉಮೇಶ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆಯಾದ್ರೂ ಅವರಿಗೆ ಯಾರಿಗೂ ಈ ಅನುಭವ ಆಗಿಲ್ಲ. ಉಮೇಶ್ ಶೆಟ್ಟಿ ಅವರ ಪುತ್ರಿ ತನ್ನ ಶಿಕ್ಷಣದ ಸಲುವಾಗಿ ಮೊಬೈಲ್ ನೋಡುತ್ತಿರುವ ಸಂದರ್ಭದಲ್ಲಿ ಇಂತಹ ಅನುಭವ ಉಂಟಾಗಿ ಫೋಟೋ ತೆಗೆದಾಗ ಒಂದು ಆಕೃತಿ ಮೊಬೈಲ್ ಫೋಟೋದಲ್ಲಿ ಸೆರೆಯಾಗಿದೆ.

ಮಲಗಿದ್ದ ವೇಳೆ ಕುತ್ತಿಗೆ ಹಿಡಿದಂತಾಗುವುದು, ಪಾತ್ರೆಗಳನ್ನು ಎಸೆಯುವುದು, ಬಟ್ಟೆಗೆ ಬೆಂಕಿ ತಗಲುವುದು ಮೊದಲಾದ ಘಟನೆಗಳು ನಡೆಯುತ್ತಿದೆ ಎನ್ನಲಾಗಿದೆ. ಇದರ ಜೊತೆಗೆ ಬಟ್ಟೆಗೆ ಬೆಂಕಿ ಬಿದ್ದಿರುವ ಫೋಟವನ್ನು ಕೂಡಾ ಅವರು ತೆಗೆದಿದ್ದಾರೆ. ಒಟ್ಟಾರೆ ಈ ಮನೆಯಲ್ಲಿ ಕಾಡುವ ಸಮಸ್ಯೆಯ ಬಗ್ಗೆ ಜನರು ತಲೆಗೊಂದು ಮಾತನಾಡುತ್ತಿದ್ದು, ಭೂತ ಇದೆಯಾ ಇಲ್ಲವೋ ಎಂಬ ಕುತೂಹಲದಿಂದ ಪರೀಕ್ಷೆ ನಡೆಸಲು ಹಲವರು ಇವರ ಮನೆಗೆ ಬರ್ತಾ ಇದ್ದಾರೆ. ಕಳೆದ ಮೂರು ತಿಂಗಳಿನಿಂದ ಈ ಕುಟಂಬ ಭೂತದ ಕಾಟದಿಂದ ನಿದ್ದೆ ಇಲ್ಲದೆ ಕಳೆಯುತ್ತಿದ್ದು ಜೀವಭಯದಲ್ಲಿ ಕುಟುಂಬಸ್ತಹರ ಜೀವನ ನಡೆಸುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular