Thursday, November 27, 2025
Flats for sale
Homeಜಿಲ್ಲೆಬೆಳ್ತಂಗಡಿ ; ಧರ್ಮಸ್ಥಳ ದೇವಸ್ಥಾನದ ವಠಾರದಲ್ಲಿ ಚಿನ್ನಾಭರಣ ಕಳವು ಪ್ರಕರಣ, ಇಬ್ಬರ ಬಂಧನ.

ಬೆಳ್ತಂಗಡಿ ; ಧರ್ಮಸ್ಥಳ ದೇವಸ್ಥಾನದ ವಠಾರದಲ್ಲಿ ಚಿನ್ನಾಭರಣ ಕಳವು ಪ್ರಕರಣ, ಇಬ್ಬರ ಬಂಧನ.

ಬೆಳ್ತಂಗಡಿ ; ದಿ. ಮೇ 03-2025 ರಂದು ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿರುವ ಲತಾ ಎಂಬುವರ ಬ್ಯಾಗ್ ನಲ್ಲಿ ಇರಿಸಿದ್ದ 6,79,000ರೂಪಾಯಿ ಮೌಲ್ಯದ 97ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 17-2025 ಕಲಂ 303(2) BNS 2023 ರಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಹುಬ್ಬಳ್ಳಿ ನಗರದ ಸಟಲ್ಮೆಂಟ್ ನಿವಾಸಿ ಬಿ.ಬಿ.ಜಾನ್(59) ಮತ್ತು ಆಕೆಯ ಮಗಳು ಆರತಿ @ಮಸಾಬಿ @ ಅಸ್ಮಾ (34) ಅರೋಪಿಗಳು ನ. 23 ರಂದು ಮತ್ತೆ ಕಳ್ಳತನ ಮಾಡಲು ಬರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳದ ದ್ವಾರಕ ಬಳಿ ದಸ್ತಗಿರಿ ಮಾಡಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಮುಂದಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ವಿಚಾರಣೆ ನಡೆಸಲಾಗಿ ಆರೋಪಿಗಳ ಹುಬ್ಬಳಿ ಮನೆಯಿಂದ ಕಳ್ಳತನ ಮಾಡಿದ ಸುಮಾರು 5,32,000 ಸಾವಿರ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಬೆಳ್ತಂಗಡಿ ವೃತ ನಿರೀಕ್ಷಕರು ಬಿ ಜಿ ಸುಬ್ಬಪುರ್ ಮಠ್, ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕರು ಸಮರ್ಥ್ ಆರ್ ಗಾಣಿಗೇರ, ಸಿಬ್ಬಂದಿ ಹೆಚ್ ಸಿ ರಾಜೇಶ್, ಹೆಚ್ ಸಿ ಪ್ರಶಾಂತ್, ಹೆಚ್ ಸಿ ಸಂದೀಪ್, ಪಿಸಿ ಮಲ್ಲಿಕಾರ್ಜುನ್, ಪಿಸಿ ಶಶಿಕುಮಾರ್, ಪಿಸಿ ಮಂಜುನಾಥ್ ಪಾಟೀಲ್, ಮಹೆಚ್ ಸಿ ಪ್ರಮೋದಿನಿ, ಮಹೆಚ್ ಸಿ ಸುನಿತಾ, ಮಪಿಸಿ ಸೌಭಾಗ್ಯ, ಮಪಿಸಿ ದೀಪಾ, ಉಷಾರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular