ಬೆಳ್ತಂಗಡಿ : ಕಳೆದ ಬೇಸಿಗೆಯಲ್ಲೂ ಚಾರ್ಮಢಿ ರಸ್ತೆಯಲ್ಲಿ ಬೀಡುಬಿಟ್ಟಿದ್ದ ಆನೆ. ಮಳೆಗಾಲ ಆರಂಭವಾದ ಬಳಿಕ ಕಾಡು ಸೇರಿತ್ತು. ಇದೀಗ ಮತ್ತೆ ರಸ್ತೆ ದಾಟುವುದು ಕಂಡು ಬಂದಿದೆ. ಮೂಡಿಗೆರೆ ಬೈರಾ ಎಂಬ ಆನೆ ಇದಾಗಿದ್ದು, ಸದ್ಯ ಇದುವರೆಗೂ ಯಾರಿಗೂ ತೊಂದರೆ ಮಾಡಿಲ್ಲ. ಕಳೆದ ವರ್ಷ ಬೈಕ ಸವಾರನೊಬ್ಬ ಆನೆಯನ್ನು ಗಮನಿಸದೆ ಸಮೀಪದಲ್ಲೇ ಪಾಸ್ ಆಗಿದ್ದನಾದ್ರೂ ಆನೆ ಯಾವುದೇ ಪ್ರತಿರೋಧ ತೋರಿಸಿರಿಲಿಲ್ಲ. ಹಾಗಂತ ತಿರುವು ರಸ್ತೆಯಲ್ಲಿ ಆನೆ ಅಡ್ಡಾಡುವ ಕಾರಣ ವಾಹನ ಸವಾರರು ಎಚ್ಚರದಿಂದ ವಾಹನ ಚಲಾಯಿಸಬೇಕಾಗಿದೆ.
ದಟ್ಟಣೆ ವಾಹನ ಸಂಚಾರವಿರುವ ಚಾರ್ಮಾಡಿ ಘಾಟ್ ನಲ್ಲಿ ಆನೆ ಬೀಡುಬಿಟ್ಟರೆ ಚಿಕ್ಕಮಗಳೂರು ,ಮಂಗಳೂರು ,ಧರ್ಮಸ್ಥಳ ಸಂಚಾರ ಅಸ್ಥವ್ಯಸ್ಥ ಗೊಳ್ಳುವುದಂತೂ ನಿಜ.ಅರಣ್ಯ ಇಲಾಖೆ ಯಾವ ರೀತಿ ಆನೆ ಸೆರೆಹಿಡಿಯಲು ಕ್ರಮ ಕೈಗೊಳ್ಳುತ್ತಾರೆಂಬುದನ್ನು ಮುಂದೆ ಕಾದುನೋಡಬೇಕಾಗಿದೆ.