ಬೆಳ್ತಂಗಡಿ : ತಂದೆ-ಮಗನ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಮಗನ ಸಾವಿನಲ್ಲಿ ಅಂತ್ಯವಾದ ಘಟನೆ ಉಜಿರೆಯಲ್ಲಿ ಭಾನುವಾರ ತಡರಾತ್ರಿ ಅಕ್ಟೋಬರ್ 29ರಂದು ನಡೆದಿದೆ.
ಕೃಷ್ಣಯ್ಯ ಆಚಾರಿ (75) ಅವರ ಪುತ್ರ ಜಗದೀಶ್ ಆಚಾರಿ (31) ಭಾನುವಾರ ರಾತ್ರಿ ಕೃಷ್ಣಯ್ಯ ಮಲಗಿದ್ದಾಗ ಗಲಾಟೆ ಸೃಷ್ಟಿಸಿದ್ದಾರೆ. ಇದರಿಂದ ಕೋಪಗೊಂಡ ಕೃಷ್ಣಯ್ಯ ತನ್ನ ಮಗನಿಗೆ ತಾನು ಇಟ್ಟಿದ್ದ ಹಳೆಯ ಚಾಕುವಿನಿಂದ ಇರಿದು ಹತ್ಯೆಮಾಡಿದ್ದಾನೆ ಎಂದು ವರದಿಯಾಗಿದೆ.
ಜಗದೀಶ್ ಹತ್ಯೆಗೈದ ಕೃಷ್ಣಯ್ಯ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಅವರಿಗೆ ಇಬ್ಬರು ಪುತ್ರಿಯರು ಮತ್ತು ಐವರು ಗಂಡು ಮಕ್ಕಳಿದ್ದಾರೆ.


