ಬೆಳ್ತಂಗಡಿ : ಮದ್ಯದ ಅಮಲಿನಲ್ಲಿ ಪತಿ ಪತ್ನಿಯ ಕಣ್ಣು ಮತ್ತು ಕೆನ್ನೆಗಳನ್ನು ಕಚ್ಚಿ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ .
ಸೋಮವಾರ ರಾತ್ರಿ ಬೆಳ್ತಂಗಡಿ ನಿವಾಸಿಗಳಾದ ಸುರೇಶ್ ಮತ್ತು ಅವರ ಪತ್ನಿಯ ನಡುವೆ ಜಗಳ ನಡೆದಿದ್ದು, ಪತಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
55 ವರ್ಷದ ಸುರೇಶ್ ಎಂಬಾತ ತನ್ನ ಪತ್ನಿಯ ಮೇಲೆ ಹೆಲ್ಮೆಟ್ನಿಂದ ಹಲ್ಲೆ ನಡೆಸಿ ಆಕೆಯ ಮುಖಕ್ಕೆ ಕಚ್ಚಿ ಗಾಯಗೊಳಿಸಿದ್ದು, ರಕ್ತಸ್ರಾವವಾಗಿದೆ.
ತಾಯಿಯ ರಕ್ಷಣೆಗೆ ಬಂದಾಗ ಅವರ ಮಗಳ ಮೇಲೂ ಹಲ್ಲೆ ನಡೆಸಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಮನೆಯಿಂದ ಓಡಿ ಹೋಗಿದ್ದಾಳೆ.
ಮಂಗಳವಾರ ಬೆಳಗ್ಗೆ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಅವರು ಮತ್ತು ಅವರ ಮಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಕಾನೂನಿನ ವಿದಿ ವಿಧಾನಗಳಂತೆ (IPC 323, 324, 326), ಶಾಂತಿ ಭಂಗ ಪ್ರಚೋದನೆ (IPC 504) ಉದ್ದೇಶಪೂರ್ವಕವಾಗಿ ಅವಮಾನಿಸಿದ (IPC 504) (IPC 506) ಸೆಕ್ಷನ್ ಗಳಂತೆ ಪ್ರಕರಣ ದಾಖಲಿಸಿದ್ದಾರೆ.


