ಬೆಳಗಾವಿ : ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ಗೆ ವೇ* ಎಂಬ ಆಕ್ಷೇಪಾರ್ಹ ಪದ ಬಳಕೆ ಆರೋಪದ ಹಿನ್ನೆಲೆ ಪೊಲೀಸರು ಅವರನ್ನು ಬಂಧಿಸಿದ್ದರು ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ MLC ಸಿ.ಟಿ.ರವಿ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ 5 ನೇ ಜೆ.ಎಂ.ಎಫ.ಸಿ ಕೋರ್ಟ್ ನಿಂದ ಆದೇಶ ಹೊರಡಿಸಿದ್ದು ಸಿ.ಟಿ.ರವಿಯನ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸೂಚನೆ ನೀಡಿದೆ.
ಇಂದು ಬೆಳಗಾವಿ 5 ನೇ ಜೆ.ಎಂ.ಎಫ.ಸಿ ಕೋರ್ಟ್ ನಲ್ಲಿ ಬಿಜೆಪಿ MLC ಸಿ.ಟಿ.ರವಿಯವರನ್ನು ಹಿರೇಬಾಗೇವಾಡಿ ಪೊಲೀಸರು ಹಾಜರು ಪಡಿಸಿದ್ದರು ಈ ಹಿನ್ನೆಲೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲು ನ್ಯಾಯಾಧೀಶೆ ಸ್ಪರ್ಶಾ ಡಿಸೋಜಾರಿಂದ ಆದೇಶ ಹೊರಡಿಸಿದ್ದಾರೆ. ಟ್ರಾಂಜಿಟ್ ವಾರೆಂಟ್ ಮೇಲೆ ಸಿ.ಟಿ.ರವಿಯನ್ನ ಪೊಲೀಸರು ಕರೆದುಕೊಡುಹೋಗುತ್ತಾರೆಂದು ಮಾಹಿತಿ ದೊರೆತಿದೆ.
ಸಿ.ಟಿ.ರವಿ ಪ್ರಕರಣ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಹಿನ್ನೆಲೆ ಮತ್ತೆ ಕೋರ್ಟ್ ಗೆ ಬಿಜೆಪಿ ನಾಯಕರು ವಿಜಯೇಂದ್ರ, ಆರ.ಅಶೋಕ್, ಅರವಿಂದ್ ಬೆಲ್ಲದ, ಅಭಯ ಪಾಟೀಲ್, ಸುನೀಲ ಕುಮಾರ್ ಆಗಮಿಸಿದ್ದು ಸಿ.ಟಿ.ರವಿ ಹಾಗೂ ಅವರ ಪರವಿರುವ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆಂದು ತಿಳಿದಿದೆ.